

Saurabh Bharadwaj: ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ ಇಂಡಿಯಾ ಗೆಲುವಿನ ಬಳಿಕ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಈ ಗೆಲುವನ್ನು ಪಹಲ್ಗಾಮ್ನಲ್ಲಿ ಮಡಿದ ಸಂತ್ರಸ್ತರಿಗೆ ಅರ್ಪಿಸುತ್ತೇವೆ ಎಂದು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಆಪ್ ನಾಯಕ ಸೌರಭ್ ಭಾರದ್ವಾಜ್ ಪಂದ್ಯದ ಗಳಿಕೆಯನ್ನು ಸಂತ್ರಸ್ತ ಕುಟುಂಬಗಳಿಗೆ ದಾನ ಮಾಡುವಂತೆ ಸವಾಲು ಹಾಕಿದ್ದಾರೆ.
ದೆಹಲಿಯಲ್ಲಿ ಈ ಕುರಿತು ಮಾತನಾಡಿರುವ ಸೌರಭ್, ಪಾಕ್ ವಿರುದ್ಧದ ಈ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಅರ್ಪಿಸಿದ್ದೇನೆ ತುಂಬಾ ಸುಲಭವಾಗಿ ಹೇಳಿದ್ದೀರಿ. ನೀವು ತುಂಬಾ ಅರ್ಥಮಾಡಿಕೊಂಡಿದ್ದೀರಿ. ಬಿಸಿಸಿಐ, ಐಸಿಸಿ, ಪ್ರಸಾರಕರು ಮತ್ತು ಜಾಹೀರಾತುದಾರರ ಮೂಲಕ ಪಂದ್ಯದ ಸಮಯದಲ್ಲಿ ಗಳಿಸಿದ ಹಣವನ್ನು ಧೈರ್ಯವಿದ್ದರೆ ಪಹಲ್ಗಾಮ್ ದಾಳಿಯ ಸಂತ್ರಸ್ತ ವಿಧವೆಯರಿಗೆ ದಾನ ಮಾಡಿ. ಆದರೆ ನಿಮಗೆ ಅಂತಹ ಕೆಲಸ ಮಾಡಲು ಆಗಲ್ಲ ಎಂದು ಕಿಡಿಕಾರಿದ್ದಾರೆ.
ಭಾನುವಾರ(ಸೆ. 14) ಪಂದ್ಯಕ್ಕೂ ಭಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಪಂದ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಅದರ ಹೊರತಾಗಿಯೂ ಪಾಕ್-ಇಂಡಿಯಾ ಪಂದ್ಯದಲ್ಲಿ ಭಾರತ 7 ವಿಕೆಟ್ಗಳಿಂದ ಗೆಲುವು ಪಡೆಯಿತು. ಪಂದ್ಯದ ನಂತರ ಕ್ಯಾಪ್ಟನ್ ಸೂರ್ಯಕುಮಾರ ಯಾದವ್ ಅವರು ಆಪರೇಷನ್ ಸಿಂಧೂರ್ನಲ್ಲಿ ಭಾಗವಹಿಸಿದ ನಮ್ಮ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸುತ್ತೇವೆ. ಪಹಲ್ಗಾಮ್ನಲ್ಲಿ ಮೃತರಾದ ಸಂತ್ರಸ್ತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದರು.
ಅಷ್ಟೇ ಅಲ್ಲದೇ ಭಾರತೀಯ ಆಟಗಾರರು ಪಾಕ್ ಆಟಗಾರರಿಗೆ ಕೈ ಕುಲಕದಿರಲು ನಿರಾಕರಿಸಿದರು. ಟಾಸ್ ಸಮಯದಲ್ಲಿಯೂ ಸಹ, ಇಂಡಿಯಾ ಕ್ಯಾಪ್ಟನ್ ಯಾದವ್ ಮತ್ತು ಪಾಕಿಸ್ತಾನ್ ಕ್ಯಾಪ್ಟನ್ ಸಲ್ಮಾನ್ ಅಲಿ ಆಘಾ ಅವರು ಕೈಕುಲುಕಲಿಲ್ಲ. (ಏಜೆನ್ಸೀಸ್)