ಗ್ಯಾಸ್ ಸಿಲಿಂಡರ್ ಬದಲಾಯಿಸುವ ವಿಚಾರಕ್ಕೆ ಜಗಳ; ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆಗೈದ ಪಾಪಿ ಮಗ| brutally beatens

Untitled design (42)
Published on

brutally beatens: ರಾಜಸ್ಥಾನದ ಜೈಪುರದಲ್ಲಿ ಗ್ಯಾಸ್ ಸಿಲಿಂಡರ್ ಬದಲಾಯಿಸುವ ವಿಚಾರದಲ್ಲಿ ನಡೆದ ಸಣ್ಣ ಜಗಳಕ್ಕೆ ಸಂಬಂಧಿಸಿದಂತೆ ಮಗನೇ ತಾಯಿಯನ್ನು ಭೀಕರವಾಗಿ ಥಳಿಸಿ ಕೊಂದಿದ್ದಾನೆ. ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಆರೋಪಿ ನವೀನ್ ಸಿಂಗ್, ತನ್ನ ತಾಯಿ ಸಂತೋಷ್​ಳನ್ನು ಕೋಲಿನಿಂದ ಥಳಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬದಲಾಯಿಸುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ. ತಂದೆ ಮತ್ತು ಸಹೋದರಿ ಬಿಡಿಸಲು ಬಂದರು, ಕೇರ್ ಮಾಡದೇ ತಾಯಿಯನ್ನು ಥಳಿಸಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಾಳೆ.

EndFragment EndFragment

ವೀಡಿಯೊದಲ್ಲಿ ಆರೋಪಿ ನವೀನ್ ಸಹೋದರಿ, "2016 ರಲ್ಲಿ ನಾನು ಅವನು ಒಬ್ಬ ಅಪರಾಧಿ ಎಂದು ಹೇಳಿದ್ದೆ, ಆದರೆ ನೀವೆಲ್ಲರೂ ನನ್ನನ್ನು ಹುಚ್ಚಳು ಎಂದು ಕರೆದಿದ್ದೀರಿ" ಎಂದು ಹೇಳುವುದು ದಾಖಲಾಗಿದೆ. ಆರೋಪಿ ಮಗನನ್ನು ಕರ್ದಾನಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಹನುಮಾನ್ ಪ್ರಸಾದ್ ಮೀನಾ, ಮರಣೋತ್ತರ ಪರೀಕ್ಷೆಯಲ್ಲಿ ತಾಯಿ ದೇಹದ ಮೇಲೆ 12ಕ್ಕೂ ಹೆಚ್ಚು ಆಳವಾದ ಗಾಯಗಳಾಗಿವೆ. ತಲೆಗೆ ಗಂಭೀರವಾಗಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಸಿಂಗ್ ನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿ ನವೀನ್ ತಂದೆ ಲಕ್ಷ್ಮಣ್ ಸಿಂಗ್ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದಾರೆ. ಈ ಕುರಿತು ಮಾತನಾಡಿದ್ದು,ನನ್ನ ಮಗನನ್ನು ಗಲ್ಲಿಗೇರಿಸಬೇಕು. ಅವನ ಸಹೋದರಿಗೆ ಐದು ತಿಂಗಳಲ್ಲಿ ಮದುವೆಯಾಗಬೇಕಿತ್ತು. ತನ್ನನ್ನು ತಾನು ಹಾಳು ಮಾಡಿಕೊಂಡಿದ್ದಲ್ಲದೆ, ನಮ್ಮ ಕುಟುಂಬವನ್ನೂ ನಾಶಮಾಡಿದ್ದಾನೆ. ಅವನಿಗೆ ಜನ್ಮ ನೀಡಿದ ತಾಯಿಯ ಜೀವವನ್ನೇ ತೆಗೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.

ನವೀನ್ ಈ ಹಿಂದೆ ಜೆನ್​ಪ್ಯಾಕ್ಟ್​​ನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. 2019ರಲ್ಲಿ ವಿವಾಹವಾಗಿದ್ದ, ಆದರೆ ಅವನ ಹಿಂಸಾತ್ಮಕ ನಡುವಳಿಕೆ ಕಂಡು ಪತ್ನಿ ಮನೆ ಬ ಬಿಟ್ಟು ತವರು ಮನೆ ಸೇರಿದ್ದು, ವರದಕ್ಷಿಣೆ ಕಿರುಕುಳ ದಾಖಲಿಸಿದ್ದಳು ಎಂದು ತಿಳಿದು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net