ಪಾಕ್​ನೊಂದಿಗಿನ ಸಂಬಂಧಗಳಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಸ್ವೀಕರಿಸುವುದಿಲ್ಲ: ಜೈಶಂಕರ್| Jaishankar

India - Pak
Published on

Jaishankar: ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ತಮ್ಮ ಇತಿಹಾಸವನ್ನು ಕಡೆಗಣಿಸುವ ಇತಿಹಾಸವನ್ನು ಹೊಂದಿವೆ ಎಂದು ವಿದೇಶಾಂಗ ಸಚಿವ ಜೈಶಂಕರ್​ ಶನಿವಾರ (ಆಗಸ್ಟ್​,23) ಟೀಕಿಸಿದ್ದಾರೆ.

ಈ ಬಗ್ಗೆ ದಿ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್​ನಲ್ಲಿ ಮಾತನಾಡಿದ ಜೈಶಂಕರ್​, ಅಮೆರಿಕವು ಪಾಕಿಸ್ತಾನದ ಅಬೋಟಾಬಾದ್‌ನಿಂದ ಅಲ್-ಖೈದಾ ಸಂಘಟನೆಯ ಭಯೋತ್ಪಾದಕ ನಾಯಕ ಒಸಾಮಾ ಬಿನ್ ಲಾಡೆನ್ ಕೊಂದಿದ್ದನು ನೆನಪಿಸಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ವಿದೇಶಾಂಗ ಸಚಿವರು, ಯುಎಸ್ ಮತ್ತು ಪಾಕಿಸ್ತಾನ ಪರಸ್ಪರರೊಂದಿಗಿನ ಸಮಾನ ಇತಿಹಾಸವನ್ನು ಹೊಂದಿದ್ದಾರೆ. ಉಭಯ ದೇಶಗಳು ತಮ್ಮ ಇತಿಹಾಸವನ್ನು ಕಡೆಗಣಿಸುವ ಇತಿಹಾಸವನ್ನು ಹೊಂದಿದ್ದಾರೆ. ಅಮೆರಿಕ ಮಿಲಿಟರಿ ಪಾಕಿಸ್ತಾನದ ಅಬೋಟಾಬಾದ್‌ಗೆ ಹೋಗಿ ಅಲ್ಲಿ ಯಾರನ್ನು ಕಂಡು ಹಿಡಿಯಿತು? ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಮೆರಿಕದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಅಲ್ಲದೆ, ಪಾಕಿಸ್ತಾನದೊಂದಿಗಿನ ಸಂಬಂಧಗಳಲ್ಲಿ ಭಾರತವು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಜೈಶಂಕರ್​ ಹೇಳಿದ್ದಾರೆ.

1970ರ ದಶಕದಿಂದ 50 ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಭಾರತ-ಪಾಕ್ ಸಂಘರ್ಷದ ವಿಷಯದಲ್ಲಿ, ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಗಳಲ್ಲಿ ನಾವು ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂಬ ರಾಷ್ಟ್ರೀಯ ಒಮ್ಮತ ಈ ದೇಶದಲ್ಲಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಅಮೆರಿಕ-ಪಾಕಿಸ್ತಾನ ಸಂಬಂಧಗಳು

ಇದೇ ತಿಂಗಳ ಆರಂಭದಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅಮೆರಿಕಕ್ಕೆ ಎರಡನೇ ಪ್ರವಾಸವನ್ನು ಕೈಗೊಂಡಿದ್ದರು. ಅಲ್ಲದೆ, ಪಾಕಿಸ್ತಾನ ಮತ್ತು ಅಮೆರಿಕ ಕೂಡ ಸುಂಕಗಳಲ್ಲಿನ ವ್ಯತ್ಯಾಸಗಳನ್ನು ಯಶಸ್ವಿಯಾಗಿ ಬಗೆಹರಿಸಿಕೊಂಡಿವೆ. ಅಮೆರಿಕ ಪಾಕಿಸ್ತಾನಿ ಸರಕುಗಳ ಮೇಲೆ ಶೇಕಡಾ19 ರಷ್ಟು ಸುಂಕ ವಿಧಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಂಡಿದೆ.

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಐಸಿಸ್-ಖೋರಾಸನ್ ಮತ್ತು ತಾಲಿಬಾನ್ ಸೇರಿದಂತೆ ಪ್ರಮುಖ ಉಗ್ರಗಾಮಿ ಗುಂಪುಗಳನ್ನು ಎದುರಿಸಲು ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರವನ್ನು ಎರಡೂ ಕಡೆಯವರು ಇಸ್ಲಾಮಾಬಾದ್‌ನಲ್ಲಿ ಭಯೋತ್ಪಾದನಾ ನಿಗ್ರಹ ಮಾತುಕತೆಯನ್ನು ನಡೆಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net