

ನವದೆಹಲಿ: ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಆಗಿರುವ ಭಾರತವು ದಶಕದ ದ್ವಿತೀಯಾರ್ಧದಲ್ಲಿ ಜಾಗತಿಕ ತೈಲ ಬೇಡಿಕೆಯ ಚಾಲಕವಾಗಲಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಬುಧವಾರ ಮುನ್ಸೂಚನೆ ನೀಡಿದೆ.
ಪ್ಯಾರಿಸ್ ಮೂಲದ ಇಂಧನ ಕಾವಲುಗಾರ ಸಂಸ್ಥೆಯಾಗಿರುವ ಐಇಎ ತನ್ನ ತೈಲ 2024 ವರದಿಯಲ್ಲಿ,
ಭಾರತದ ತೈಲ ಬೇಡಿಕೆಯು 2023 ಮತ್ತು 2030ರ ನಡುವೆ ಚೀನಾವನ್ನು ಹೊರತುಪಡಿಸಿ ಇತರ ದೇಶಗಳಿಗಿಂತ ಹೆಚ್ಚು ಬೆಳೆಯುವ ಮುನ್ಸೂಚನೆಯಿದೆ ಎಂದು ಹೇಳಿದೆ.
ಭಾರತದ ತೈಲ ಬೇಡಿಕೆಯು 2023 ರಲ್ಲಿ ದಿನಕ್ಕೆ 54 ಲಕ್ಷ ಬ್ಯಾರೆಲ್‌ಗಳಿಂದ (ಬಿಪಿಡಿ) 2030ರ ವೇಳೆಗೆ 67 ಲಕ್ಷ ಬಿಪಿಡಿಗೆ ಏರುತ್ತದೆ. ಇದು ಶೇಕಡಾ 3.2 ಅಥವಾ 13 ಲಕ್ಷ ಬಿಪಿಡಿ ಬೆಳವಣಿಗೆಯಾಗಿದೆ ಎಂದು ಅದು ತಿಳಿಸಿದೆ.