23 ವರ್ಷಗಳ ಬಳಿಕ 'ಚೆಸ್ ವಿಶ್ವಕಪ್' ಆತಿಥ್ಯ ವಹಿಸಲಿರುವ ಭಾರತ; ಪಂದ್ಯಾವಳಿ ದಿನಾಂಕ ಬಿಡುಗಡೆ | chess

chess
Published on

ನವದೆಹಲಿ; 23 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತವು ಚೆಸ್ ವಿಶ್ವಕಪ್ ಅನ್ನು ಆಯೋಜಿಸಲಿದೆ. ಈ ಪಂದ್ಯಾವಳಿಯು ಈ ವರ್ಷ ಅಕ್ಟೋಬರ್ 30 ರಿಂದ ನವೆಂಬರ್ 27 ರವರೆಗೆ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ಇಂದು ಅಧಿಕೃತವಾಗಿ ಮಾಹಿತಿ ನೀಡಿದೆ.

ಭಾರತ ಕೊನೆಯದಾಗಿ 2002 ರಲ್ಲಿ ಹೈದರಾಬಾದ್‌ನಲ್ಲಿ ಚೆಸ್ ವಿಶ್ವಕಪ್​ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ವಿಶ್ವನಾಥನ್ ಆನಂದ್ ಎಂಬುವವರು ಪ್ರಶಸ್ತಿಯನ್ನು ಗೆದ್ದಿದ್ದರು. ಬಳಿಕ ಈ ವರ್ಷ ಭಾರತಕ್ಕೆ ಪ್ರತಿಷ್ಠಿತ FIDE ವಿಶ್ವಕಪ್ ಬರುತ್ತಿದೆ. ಅಕ್ಟೋಬರ್ 30 ರಿಂದ ನವೆಂಬರ್ 27, 2025 ರವರೆಗೆ ನಿಗದಿಯಾಗಿರುವ ಈ ಪಂದ್ಯಾವಳಿಯಲ್ಲಿ, 2026 ರ FIDE ಅಭ್ಯರ್ಥಿಗಳ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಮತ್ತು ಅರ್ಹತಾ ಸ್ಥಾನಗಳಿಗಾಗಿ ಹೋರಾಡುವ ವಿಶ್ವದ ಅತ್ಯುತ್ತಮ ಆಟಗಾರರು ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು FIDE ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ ದೇಶವು ಇತ್ತೀಚೆಗೆ FIDE ಚೆಸ್ ಒಲಿಂಪಿಯಾಡ್ 2022, ಟಾಟಾ ಸ್ಟೀಲ್ ಚೆಸ್ ಇಂಡಿಯಾ, FIDE ವಿಶ್ವ ಜೂನಿಯರ್ U20 ಚಾಂಪಿಯನ್‌ಶಿಪ್‌ಗಳು 2024 ಮತ್ತು FIDE ಮಹಿಳಾ ಗ್ರ್ಯಾಂಡ್ ಪ್ರಿಕ್ಸ್‌ನ 5 ನೇ ಲೆಗ್ (ಏಪ್ರಿಲ್ 2025) ನಂತಹ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಒಟ್ಟು 206 ಆಟಗಾರರು ಈ ಮೆಗಾ ಈವೆಂಟ್‌ನಲ್ಲಿ ಭಾಗವಹಿಸಲಿದ್ದು, ಇದನ್ನು ನಾಕೌಟ್ ಸ್ವರೂಪದಲ್ಲಿ ಆಡಲಾಗುತ್ತದೆ. ಪ್ರತಿ ಸುತ್ತಿನ ನಂತರ ಸೋತ ಅಭ್ಯರ್ಥಿಯನ್ನು ಹೊರಹಾಕಲಾಗುತ್ತದೆ. ಈ ವಿಶ್ವಕಪ್‌ನಲ್ಲಿ ಒಟ್ಟು 206 ಆಟಗಾರರು ಭಾಗವಹಿಸಲಿದ್ದು, ಎಂಟು ಸುತ್ತುಗಳು ನಡೆಯಲಿದೆ. ಪ್ರತಿ ಸುತ್ತಿನಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, ಪಂದ್ಯದ 40 ನಡೆಗಳಿಗೆ ಆಟಗಾರರಿಗೆ 90 ನಿಮಿಷಗಳು ಮತ್ತು ಅದರ ನಂತರ ಉಳಿದ ಆಟಕ್ಕೆ ಕೇವಲ 30 ನಿಮಿಷಗಳ ಕಾಲಾವಕಾಶ ಸಿಗುತ್ತದೆ.

FIDE ಸಿಇಒ ಹೇಳಿದ್ದೇನು.?

(ಏಜೆನ್ಸೀಸ್)

ಇನ್ನೂ ಈ ಬಗ್ಗೆ FIDE ಸಿಇಒ ಎಮಿಲ್ ಸುಟೋವ್ಸ್ಕಿ ಮಾತನಾಡಿದ್ದು, ಚೆಸ್ ಬಗ್ಗೆ ಆಳವಾದ ಉತ್ಸಾಹ ಮತ್ತು ಬೆಂಬಲ ಹೊಂದಿರುವ ಭಾರತಕ್ಕೆ FIDE ವಿಶ್ವಕಪ್ 2025 ಅನ್ನು ತರಲು ನಾವು ರೋಮಾಂಚನಗೊಂಡಿದ್ದೇವೆ ಎಂದಿದ್ದಾರೆ. ಭಾರತೀಯ ಚೆಸ್ ಅಭಿಮಾನಿಗಳ ಉತ್ಸಾಹ ಯಾವಾಗಲೂ ಗಮನಾರ್ಹವಾಗಿದೆ ಮತ್ತು ಸ್ಥಳೀಯ ಚೆಸ್ ಪ್ರಿಯರಲ್ಲಿ ಆನ್-ಸೈಟ್ ಮತ್ತು ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ನಾವು ನಿರೀಕ್ಷಿಸುತ್ತೇವೆ. ಅನುಭವವನ್ನು ಹೆಚ್ಚಿಸಲು ಚೆಸ್ ದಂತಕಥೆಗಳನ್ನು ಒಳಗೊಂಡ ಹಲವಾರು ಸೈಡ್ ಈವೆಂಟ್‌ಗಳನ್ನು ಆಯೋಜಿಸಲು FIDE ಬದ್ಧವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net