

ನವದೆಹಲಿ: ಸೆಪ್ಟೆಂಬರ್ 2024 ರಲ್ಲಿ, ಭಾರತವು MSCI ಎಮರ್ಜಿಂಗ್ ಮಾರ್ಕೆಟ್ಸ್ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್ ನಲ್ಲಿ ಭಾರತದ ಅದ್ವಿತೀಯ ಸಾಧನೆಯನ್ನು ಮೋರ್ಗನ್ ಸ್ಟಾನ್ಲಿ ಪೋರ್ಟ್‌ಫೋಲಿಯೋ ಬಹಿರಂಗಪಡಿಸಿದೆ.
ಮೋರ್ಗನ್ ಸ್ಟ್ಯಾನ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಸೆಪ್ಟೆಂಬರ್ 2024 ರಲ್ಲಿ, (MSCI EM IMI) ನಲ್ಲಿ ಭಾರತ ಚೀನಾವನ್ನು ಮೀರಿಸಿದೆ. ವರದಿಯ ಪ್ರಕಾರ, MSCI EM IMI ನಲ್ಲಿ ಭಾರತದ ತೂಕವು 22.27 ಪ್ರತಿಶತಕ್ಕೆ ಏರಿದೆ, ಆದರೆ ಚೀನಾದ ತೂಕವು 21.58 ಪ್ರತಿಶತಕ್ಕೆ ಇಳಿದಿದೆ.
MSCI IMI ಒಟ್ಟು 3,355 ಸ್ಟಾಕ್ಗಳನ್ನು ಒಳಗೊಂಡಿದ್ದು, ದೊಡ್ಡ, ಮಧ್ಯಮ ಮತ್ತು ಸಣ್ಣ ಕ್ಯಾಪ್ ಕಂಪನಿಗಳನ್ನು ಒಳಗೊಂಡಿದೆ. ಇದು 24 ಹೊರಹೊಮ್ಮುತ್ತಿರುವ ಮಾರುಕಟ್ಟೆ ರಾಷ್ಟ್ರಗಳಾದ್ಯಂತ ಸ್ಟಾಕ್ ಗಳನ್ನು ಒಳಗೊಂಡಿದ್ದು ಮತ್ತು ಪ್ರತಿಯೊಂದು ದೇಶದಲ್ಲೂ ಸುಮಾರು 85% ಮುಕ್ತವಾಗಿ ಹೊಂದಾಣಿಕೆ ಮಾಡಿದ ಮಾರುಕಟ್ಟೆ ಬಂಡವಾಳವನ್ನು ಒಳಗೊಳ್ಳುವ ಗುರಿ ಹೊಂದಿದೆ.
ಪ್ರಮುಖ MSCI EM ಸೂಚ್ಯಂಕ (ಸ್ಟ್ಯಾಂಡರ್ಡ್ ಇಂಡೆಕ್ಸ್) ದೊಡ್ಡ ಮತ್ತು ಮಧ್ಯಮ ಮೊತ್ತದ ಕಂಪನಿಗಳನ್ನು ಒಳಗೊಂಡಿದೆ. IMI ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ, ಮಧ್ಯಮ ಮತ್ತು ಸಣ್ಣ ಮೊತ್ತದ ಷೇರುಗಳನ್ನು ಒಳಗೊಳ್ಳುತ್ತದೆ. MSCI IMI ನಲ್ಲಿ ಚೀನಾಕ್ಕೆ ಹೋಲಿಸಿದರೆ ಭಾರತದ ಹೆಚ್ಚಿನ ತೂಕವು ಅದರ ಬುಟ್ಟಿಯಲ್ಲಿ ಸಣ್ಣ ಮಾರುಕಟ್ಟೆ ಮೌಲ್ಯದ ಕಂಪನಿಗಳ ಹೆಚ್ಚಿನ ತೂಕದಿಂದ ಉಂಟಾಗಿದೆ.
ಈ ಮರುಸಮತೋಲನವು ವ್ಯಾಪಕವಾದ ಮಾರುಕಟ್ಟೆ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಚೀನಾದಲ್ಲಿನ ಆರ್ಥಿಕ ಅಡೆತಡೆಗಳಿಂದಾಗಿ ಚೀನಾದ ಮಾರುಕಟ್ಟೆಗಳು ಸಂಕಷ್ಟ ಎದುರಿಸುತ್ತಿರುವಾಗ, ಭಾರತದ ಮಾರುಕಟ್ಟೆಗಳು ಅನುಕೂಲಕರವಾದ ಸ್ಥೂಲ ಆರ್ಥಿಕ ಪರಿಸ್ಥಿತಿಗಳಿಂದ ಲಾಭ ಪಡೆದಿವೆ. ಇತ್ತೀಚಿನ ಕಾಲದಲ್ಲಿ, ಭಾರತದ ಆರ್ಥಿಕತೆಯ ಬಲವಾದ ಸಮಷ್ಟಿ ಆರ್ಥಿಕ ಮೂಲಾಂಶಗಳು ಹಾಗೂ ಭಾರತೀಯ ಕಂಪನಿಗಳ ದೃಢವಾದ ಕಾರ್ಯನಿರ್ವಹಣೆಯಿಂದ ಪ್ರೇರಿತವಾಗಿ, ಭಾರತವು ಅತ್ಯಂತ ಶ್ರೇಷ್ಠ ಈಕ್ವಿಟಿ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ತೋರಿಸಿದೆ.
ಇದಲ್ಲದೆ, ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿನ ಲಾಭಗಳು ವ್ಯಾಪಕವಾಗಿದ್ದು, ದೊಡ್ಡ ಮಾರುಕಟ್ಟೆ ಮೌಲ್ಯದ ಕಂಪನಿಗಳ ಜೊತೆಗೆ ಮಧ್ಯಮ ಮತ್ತು ಸಣ್ಣ ಮಾರುಕಟ್ಟೆ ಮೌಲ್ಯದ ಕಂಪನಿಗಳ ಸೂಚ್ಯಂಕಗಳಲ್ಲೂ ಪ್ರತಿಫಲಿಸಿವೆ. 2024ರ ಮೊದಲಾರ್ಧದಲ್ಲಿ ವಿದೇಶಿ ನೇರ ಹೂಡಿಕೆ (FDI) 47% ಹೆಚ್ಚಳ, ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆ ಮತ್ತು ಭಾರತೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಗಣನೀಯ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆ (FPI) ಈ ಸಕಾರಾತ್ಮಕ ಪ್ರವೃತ್ತಿಗೆ ಕೊಡುಗೆ ನೀಡಿದ ಪ್ರಮುಖ ಅಂಶಗಳಾಗಿವೆ.
ಪರಿಣಾಮವಾಗಿ, MSCI ತನ್ನ ಸೂಚ್ಯಂಕಗಳಲ್ಲಿ ಭಾರತೀಯ ಸ್ಟಾಕ್ ಗಳ ಸಾಪೇಕ್ಷ ತೂಕವನ್ನು ಹೆಚ್ಚಿಸುತ್ತಿದೆ. ಇದು MSCI EM IMI ಹೊರತುಪಡಿಸಿ, MSCI EM ಸೂಚ್ಯಂಕದಲ್ಲಿ ಚೀನಾದ ತೂಕದ ಸಾಪೇಕ್ಷ ಕುಸಿತದ ಜೊತೆಯಲ್ಲಿ ಭಾರತದ ತೂಕದ ಏರಿಕೆಯಿಂದಲೂ ಸ್ಪಷ್ಟವಾಗಿದೆ. ಮಾರ್ಚ್-24 ರಿಂದ ಆಗಸ್ಟ್-24 ರವರೆಗೆ, MSCI EM ನಲ್ಲಿ ಭಾರತದ ತೂಕವು 18% ರಿಂದ 20% ಕ್ಕೆ ಏರಿದೆ, ಆದರೆ ಅದೇ ಅವಧಿಯಲ್ಲಿ ಚೀನಾದ ತೂಕವು 25.1% ರಿಂದ 24.5% ಕ್ಕೆ ಕುಸಿದಿದೆ.
MSCI EM IMI ನಲ್ಲಿ ಈ ಪುನರ್ ಸಮತೋಲನದ ನಂತರ, ವಿಶ್ಲೇಷಕರ ಅಂದಾಜಿನ ಪ್ರಕಾರ ಭಾರತೀಯ ಈಕ್ವಿಟಿಗಳು ಸುಮಾರು 4 ರಿಂದ 4.5 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಹೂಡಿಕೆ ಹರಿವನ್ನು ಕಾಣಬಹುದು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅಪೇಕ್ಷಿತ ಹೂಡಿಕೆಗಳ ಗತಿಯನ್ನು ಕಾಪಾಡಿಕೊಳ್ಳಲು, ಭಾರತಕ್ಕೆ ದೇಶೀಯ ಮತ್ತು ವಿದೇಶಿ ಮೂಲಗಳಿಂದಲೂ ಬಂಡವಾಳ ಅಗತ್ಯವಿದೆ. ಈ ಸಂದರ್ಭದಲ್ಲಿ, ಜಾಗತಿಕ ಇಎಂ (EM) ಸೂಚ್ಯಂಕಗಳಲ್ಲಿ ಭಾರತದ ತೂಕದ ಹೆಚ್ಚಳವು ಸಕಾರಾತ್ಮಕ ಮಹತ್ವವನ್ನು ಪಡೆಯುತ್ತದೆ.