More

    ಏಷ್ಯನ್​ ಗೇಮ್ಸ್​; ಸೇಲಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ನೇಹಾ ಠಾಕೂರ್

    ನವದೆಹಲಿ: ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದ ಸೇಲಿಂಗ್​ನಲ್ಲಿ ಭಾರತದ ನೇಹಾ ಠಾಕೂರ್​ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ ಡಿಂಘಿ ILCA-4ರಲ್ಲಿ ನೇಹಾ ಈ ಸಾಧನೆ ಮಾಡಿದ್ದಾರೆ. ಭಾರತದಕ್ಕೆ ಇದು ಒಟ್ಟಾರೆಯಾಗಿ 12ನೇ ಪದಕವಾಗಿದೆ.

    16 ಅಂಕ ಗಳಿಸುವ ಮೂಲಕ ಥಾಯ್ಲೆಂಡ್​ನ ನೊಪಾಸ್ಸೋರ್ನ್​ ಖುನ್​ಬೂಂಜಾನ್​ ಚಿನ್ನ ಗೆದ್ದಿದ್ದಾರೆ. ಭೋಪಾಲ್​ನ ನ್ಯಾಷನಲ್​ ಸೇಲಿಂಗ್​ ಸ್ಕೂಲ್​ನ ವಿದ್ಯಾರ್ಥಿನಿಯಾಗಿರುವ ನೇಹಾ ಠಾಕೂರ್​ 32 ಅಂಕ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಅವರ ನೆಟ್​ಸ್ಕೋರ್​ 27 ಆಗಿದ್ದರಿಂದ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. 28 ನೆಟ್​ಸ್ಕೋರ್​ ಗಳಿಸಿದ್ದ ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್​ ನೆಟ್​ಸ್ಕೋರ್​ ಕಂಚಿನ ಪದಕ ಗೆದ್ದಿದ್ದಾರೆ.

    ಇದನ್ನೂ ಓದಿ: ಎಐಎಡಿಎಂಕೆ-ಬಿಜೆಪಿ ಮೈತ್ರಿ ಕಡಿತ; ಕಳ್ಳರು ಯಾವತ್ತಿದ್ದರೂ ಒಂದೇ ಎಂದು ವ್ಯಂಗ್ಯವಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್

    ಮಹಿಳೆಯರ ಡಿಂಘಿ ILCA-4ರ ವಿಭಾಗದಲ್ಲಿ ಒಟ್ಟು 11 ರೇಸ್​ಗಳನ್ನು ಒಳಗೊಂಡಿದೆ. ಒಟ್ಟು 32 ಅಂಕ ಗಳಿಸುವ ಮೂಲಕ ನೇಹಾ ತಮ್ಮ ಸ್ಪರ್ಧೆಯನ್ನು ಮುಗಿಸಿದ್ದರು. ಐದನೇ ರೇಸ್​ನಲ್ಲಿ 5 ಅಂಕ ಗಳಿಸುವ ಮೂಲಕ 27 ನೆಟ್​ಸ್ಕೋರ್​ನೊಂದಿಗೆ ಆಟ ಮುಗಿಸಿದರು. ಸೇಲಿಂಗ್​ನಲ್ಲಿ ನೆಟ್​ ಸ್ಕೋರ್​ಅನ್ನು ಎಲ್ಲಾ ರೇಸ್​ಗಳಿಂದ ಕಡಿಮೆ ಅಂಕಗಳಿಂದ ಕಳೆಯಲಾಗುತ್ತದೆ. ಕಡಿಮೆ ನೆಟ್​ ಸ್ಕೋರ್​ ಹೊಂದಿರುವವರನ್ನು ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts