ಭಾರತ-ಪಾಕ್ ಘರ್ಷಣೆ; ಗಡಿ ರಕ್ಷಣೆಗೆ ನಿಂತು ಶತ್ರುಗಳನ್ನು ಹಿಮ್ಮೆಟ್ಟಿಸಿದ್ದ ಮಹಿಳಾ ಬಿಎಸ್‌ಎಫ್ ಸಿಬ್ಬಂದಿ| bsf-women

lady army
Published on

26 ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಮೇ 7 ರ ಮುಂಜಾನೆ, ಭಾರತೀಯ ರಕ್ಷಣಾ ಪಡೆಗಳು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿದ್ದವು. ಕಾರ್ಯಾಚರಣೆಯ ಸಮಯದಲ್ಲಿ, ಗಡಿ ಭದ್ರತಾ ಪಡೆ ಮಹಿಳಾ ಸಿಬ್ಬಂದಿಯನ್ನು ಗಡಿಯಲ್ಲಿ ನಿಯೋಜಿಸಲಾಗಿತ್ತು ಎಂದು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ಅಭಿಷೇಕ್ ಪಾಠಕ್ ತಿಳಿಸಿದ್ದಾರೆ.

ಮಹಿಳೆಯರ ಪಾತ್ರ ಮತ್ತು ಪಾಕಿಸ್ತಾನದ ಪೋಸ್ಟ್‌ಗಳ ಮೇಲೆ ಗುಂಡು ಹಾರಿಸುವಲ್ಲಿ ಅವರು ತೊಡಗಿಸಿಕೊಂಡಿದ್ದನ್ನು ಶ್ಲಾಘಿಸಿದ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ಶಶಾಂಕ್ ಆನಂದ್, ಬಿಎಸ್‌ಎಫ್ ಮಹಿಳಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಪಾತ್ರ ವಹಿಸಿದ್ದಾರೆ. ಬೆಟಾಲಿಯನ್ ಪ್ರಧಾನ ಕಚೇರಿಗೆ ತೆರಳುವ ಆಯ್ಕೆಯನ್ನು ಅವರು ಹೊಂದಿದ್ದರೂ, ಅವರು ತಮ್ಮ ಪುರುಷ ಸಹವರ್ತಿಗಳೊಂದಿಗೆ ಮುಂಭಾಗದ ಪೋಸ್ಟ್‌ಗಳಲ್ಲಿ ಉಳಿಯಲು ಆಯ್ಕೆ ಮಾಡಿಕೊಂಡರು ಮತ್ತು ಪಾಕಿಸ್ತಾನಕ್ಕೆ ಬಲವಾಗಿ ಪ್ರತಿಕ್ರಿಯಿಸಿದರು. ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಸೇರಿದಂತೆ ಬಿಎಸ್‌ಎಫ್ ಮಹಿಳಾ ಸಿಬ್ಬಂದಿ, ಮುಂಭಾಗದ ಪೋಸ್ಟ್‌ಗಳನ್ನು ನಿರ್ವಹಿಸುವ ಮೂಲಕ ಮತ್ತು ಐಬಿ ಬಳಿ ಶತ್ರು ಸ್ಥಾನಗಳನ್ನು ಎದುರಿಸುವ ಮೂಲಕ ಉತ್ತಮ ಧೈರ್ಯವನ್ನು ತೋರಿಸಿದ್ದಾರೆ ಎಂದು ಆನಂದ್ ಹೇಳಿದರು. ಮಹಿಳಾ ಬಿಎಸ್‌ಎಫ್ ಸೈನಿಕರು ಈ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಮತ್ತು ದೇಶದ ಸಾರ್ವಭೌಮತ್ವ ಮತ್ತು ಗಡಿಗಳನ್ನು ರಕ್ಷಿಸಲು ಮುಂಚೂಣಿಯಲ್ಲಿ ನಿಂತರು ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತವನ್ನು ನಿರ್ಭಯವಾಗಿ ರಕ್ಷಿಸಿದ ನಂತರ ಬಿಎಸ್‌ಎಫ್‌ನ ಏಳು ಮಹಿಳಾ ಅಧಿಕಾರಿಗಳು ಆಪರೇಷನ್ ಸಿಂಧೂರ್‌ನ ಯಶಸ್ಸಿಗೆ ಕೊಡುಗೆ ನೀಡಿದರು.

ಗುಜರಾತ್‌ನ ಗಾಂಧಿನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜನರಲ್ ಪಾಠಕ್, ಗುಜರಾತ್‌ನಲ್ಲಿ 800 ಕ್ಕೂ ಹೆಚ್ಚು ಮಹಿಳಾ ಬಿಎಸ್‌ಎಫ್ ಸಿಬ್ಬಂದಿ ಇದ್ದಾರೆ. ಇಡೀ ಕಾರ್ಯಾಚರಣೆಯ ಸಮಯದಲ್ಲಿ, ಎಲ್ಲಾ ಮಹಿಳಾ ಬಿಎಸ್‌ಎಫ್ ಸಿಬ್ಬಂದಿಯನ್ನು ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಇಡೀ ತಂಡವನ್ನು ಮುನ್ನಡೆಸಿದ ಸಹಾಯಕ ಕಮಾಂಡೆಂಟ್‌ಗಳಾದ ಅಮನ್‌ದೀಪ್ ಮತ್ತು ನೀತಿ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

(ಏಜೆನ್ಸೀಸ್)

ಭಾರತದ ಆಪರೇಷನ್ ಸಿಂದೂರ್​ಗೆ ಕೋಪಗೊಂಡ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದಾಗ, ಮೂರು ದೀರ್ಘ ಹಗಲು ರಾತ್ರಿಗಳ ಕಾಲ, ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ನೇತೃತ್ವದ ಏಳು ಮಹಿಳಾ ತಂಡವು ಸ್ಥಳದಲ್ಲಿಯೇ ಇದ್ದು, ತಮ್ಮ ನೆಲೆಗಳನ್ನು ರಕ್ಷಿಸಿಕೊಂಡು ಶತ್ರುಗಳನ್ನು ಹಿಮ್ಮೆಟ್ಟುವಂತೆ ಮಾಡಿತು. ಭಂಡಾರಿ ಹೊರತುಪಡಿಸಿ, ಆರು ಮಹಿಳಾ ಕಾನ್‌ಸ್ಟೆಬಲ್‌ಗಳು ಮುಂಚೂಣಿಯ ಗಡಿ ಪೋಸ್ಟ್‌ನಲ್ಲಿ ಗನ್ ಪೊಸಿಷನ್ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net