

ಢಾಕಾ: ಇಂದು ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ODI ನಲ್ಲಿ ಬಾಂಗ್ಲಾದೇಶ ಭಾರತದ ವಿರುದ್ಧ ಒಂದು ವಿಕೆಟ್‌ನ ಅಂತರದಲ್ಲಿ ಜಯವನ್ನು ದಾಖಲಿಸಿದೆ. ಬ್ಯಾಟಿಂಗ್‌ಗೆ ಇಳಿದ ಭಾರತ 186 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ ನಾಯಕ ಲಿಟ್ಟನ್ ದಾಸ್ 41 ರನ್‌ಗಳನ್ನು ಸಂಪಾದಿಸಿದರು. ಆದರೂ ಮೆಹಿದಿ ಹಸನ್ ಮಿರಾಜ್, 39 ಎಸೆತಗಳಲ್ಲಿ 38 ರನ್‌ಗಳ ಶಕ್ತಿಶಾಲಿ ಆಟ ಆಡಿ ತಂಡವನ್ನು ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಾಗಲೇ ಜಯದದ ದಡ ಸೇರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್‌ಗಳು
ಭಾರತ: 41.2 ಓವರ್‌ಗಳಲ್ಲಿ 186 ಆಲೌಟ್ (ಕೆಎಲ್ ರಾಹುಲ್ 73; ಶಾಕಿಬ್ ಅಲ್ ಹಸನ್ 5/36, ಎಬಾದತ್ ಹೊಸೈನ್ 4/47).
ಬಾಂಗ್ಲಾದೇಶ: 46 ಓವರ್‌ಗಳಲ್ಲಿ 9 ವಿಕೆಟ್‌ಗೆ 187 (ಮೆಹಿದಿ ಹಸನ್ ಮಿರಾಜ್ ಔಟಾಗದೆ 38, ಲಿಟ್ಟನ್ ದಾಸ್ 41; ಮೊಹಮ್ಮದ್ ಸಿರಾಜ್ 3/32).
ಆಟ ಆಡಿದ್ದು ಯಾರು?
ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್ , ಕುಲದೀಪ್ ಸೇನ್. (ಏಜೆನ್ಸೀಸ್)