ಸ್ಕೋರ್‌ಕಾರ್ಡ್​ ಮರೆತುಬಿಡಿ…ಇದರಲ್ಲಿರುವ ವಿಶೇಷತೆಯೇನೆಂದು ಕೇಳಿದ ಸೆಹ್ವಾಗ್; ಗೊಂದಲಕ್ಕೀಡಾಗ ನೆಟ್ಟಿಗರು!

#VirenderSehwag #INDvsPAK #TestCricket #Fans #ViralPhoto
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಇರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಟ್ವಿಟರ್​ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿ ಪ್ರಶ್ನೆ ಕೇಳಿದ್ದಾರೆ. 2006ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್​​ ಪಂದ್ಯವೊಂದರ ಭಾರತ ತಂಡದ ಸ್ಕೋರ್​​ ಬೋರ್ಡ್​​ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ವಿರೇಂದ್ರ ಸೆಹ್ವಾಗ್ ಟ್ವಿಟರ್​​ನಲ್ಲಿ ಫೋಟೋ ಅಪ್ಲೋಡ್ ಮಾಡಿ, ಸ್ಕೋರ್‌ಕಾರ್ಡನ್ನು ಮರೆತುಬಿಡಿ, ಇದರಲ್ಲಿರುವ 11 ಜನ ಭಾರತೀಯರ ಬಗ್ಗೆ ಒಂದು ಕುತೂಹಲಕಾರಿ ವಿಷಯವಿದೆ. ಸೂಚಿಸಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್​​ ಬಗ್ಗೆ ಟ್ವಿಟರ್​​ನಲ್ಲಿ ಚರ್ಚೆಯಾಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.

ಪಾಕಿಸ್ತಾನ ವಿರುದ್ಧ 2006ರಲ್ಲಿ ನಡೆದ ಈ ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸಿದ ಸೆಹ್ವಾಗ್ - ದ್ರಾವಿಡ್ ಜೋಡಿ 404 ರನ್​ಗಳ ಜತೆಯಾಟವಾಡಿತ್ತು. ಇವರಿಬ್ಬರ ಈ ಇನ್ನಿಂಗ್ಸ್​ ಕ್ರಿಕೆಟ್ ಪ್ರೇಮಿಗಳಲ್ಲಿ ಸ್ಮರಣೀಯವಾಗಿ ಉಳಿದುಕೊಂಡಿದೆ. ಸೆಹ್ವಾಗ್ ದ್ವಿಶತಕ ಸಹಿತ248 ರನ್​ ಗಳಿಸಿದರೆ, ದ್ರಾವಿಡ್ 128 ರನ್​ ಗಳಿಸಿ ಶತಕ ಸಿಡಿಸಿದ್ದರು.

ಸೆಹ್ವಾಗ್ ಮಾಡಿರುವ ಈ ಟ್ವೀಟ್​ಗೆ, ಈ ತಂಡದಲ್ಲಿ ಒಬ್ಬರೇ ಸ್ಪಿನ್ ಬೌಲರ್ ಹರ್ಭಜನ್ ಇದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ, ಇಲ್ಲಾ... ಅನಿಲ್ ಕುಂಬ್ಳೆಯೂ ಇದ್ದಾರೆ. ಭಾರತ ಟೆಸ್ಟ್​​ ಕ್ರಿಕೆಟ್​​ನ ಗ್ರೇಟ್​ ಮ್ಯಾಚ್ ವಿನ್ನರ್ ಕುಂಬ್ಳೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net