

ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸತ್ತಿನ ಭದ್ರತೆಯಲ್ಲಿ ಭಾರಿ ಲೋಪವಾಗಿರುವ ಘಟನೆ ಬೆಳಕಿಗೆ ಬಂದಿದೆ. ಲೋಕಸಭೆಯ ಕಲಾಪದ ವೇಳೆ, ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಸದನದ ಕುರ್ಚಿಯ ಮೇಲೆ ಹಾರಿದರು, ಇದು ಗೊಂದಲವನ್ನು ಸೃಷ್ಟಿಸಿತು.
ಕಲಾಪದಲ್ಲಿದ್ದ ಸಂಸದರ ಪ್ರಕಾರ, ಇಬ್ಬರು ಯುವಕರ ಕೈಯಲ್ಲಿ ಅಶ್ರುವಾಯು ಡಬ್ಬಿಗಳಿವೆ. ಆದರೆ, ಅವರನ್ನು ಸಂಸದರು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಈ ಮಧ್ಯೆ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಇದೇ ಸಮಯದಲ್ಲಿ ಓರ್ವ ಪುರುಷ ಮತ್ತು ಮಹಿಳೆ ಸಂಸತ್ತಿನ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಇಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿಗೆ ಇಂದಿಗೆ 22 ವರ್ಷ. 21 ವರ್ಷಗಳ ಹಿಂದೆ ಇಂದು ಹಳೆ ಸಂಸತ್ ಭವನದ ಮೇಲೆ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ದರು.
ಮಾಹಿತಿ ಪ್ರಕಾರ, ಸದನದೊಳಗೆ ಪ್ರವೇಶಿಸಿದ ಇಬ್ಬರಲ್ಲಿ ಒಬ್ಬನ ಹೆಸರು ಸಾಗರ್. ಇಬ್ಬರೂ ಸಂಸದರ ಹೆಸರಿನಲ್ಲಿ ಲೋಕಸಭೆಯ ವಿಸಿಟರ್ ಪಾಸ್ ಮೇಲೆ ಬಂದಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಲೋಕಸಭೆಯ ವಿಸಿಟರ್ ಪಾಸ್ ಮೂಲಕ ಬಂದಿದ್ದಾರೆ.