ಸ್ಮಾರ್ಟ್​ವಾಚ್​ ವಿಚಾರದಲ್ಲಿ ಜಗತ್ತಿನಲ್ಲಿ ಭಾರತವೇ ನಂ.1

smartwatch
Published on

ಬೆಂಗಳೂರು: 2022ರಲ್ಲಿ ಭಾರತೀಯ ಸ್ಮಾರ್ಟ್‌ವಾಚ್ ಮಾರುಕಟ್ಟೆ ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಜಾಗತಿಕ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ವರ್ಷವೂ ವ್ಯಾಪಾರ 30 ಶೇಕಡ ಹೆಚ್ಚಾಗುತ್ತಿದೆ.

ಕೌಂಟರ್‌ಪಾಯಿಂಟ್‌ ವರದಿಯ ಪ್ರಕಾರ ಭಾರತೀಯ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಳವಣಿಗೆ ಕಂಡುಬಂದಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ವಿಚಿತ್ರ ಎಂದರೆ ಮುಂದುವರಿದ ದೇಶಗಳು ಎಂದು ಕರೆದಿಕೊಳ್ಳುವ ಯುರೋಪಿಯನ್​ ದೇಶಗಳಲ್ಲಿ ಸ್ಮಾರ್ಟ್​ವಾಚ್​ ವ್ಯಾಪಾರ ಕುಸಿತ ಕಂಡುಬಂದಿದೆ.

ಭಾರತದ ಸ್ಮಾರ್ಟ್​ವಾಚ್ ಮಾರುಕಟ್ಟೆ ಕಂಡಿತು ಶೇಕಡ 171 ಬೆಳವಣಿಗೆ!
ಭಾರತದ ಸ್ಮಾರ್ಟ್​ವಾಚ್​ ಮಾರುಕಟ್ಟೆ ವರ್ಷವೂ ಸರಾಸರಿ ಶೇಕಡ 171ರಷ್ಟು ಬೆಳವಣಿಗೆ ಕಾಣುತ್ತಿದೆ. ಇದು ಜಾಗತಿಕ ಮಾರುಕಟ್ಟೆಯ ಶೇಕಡ 30ರಷ್ಟು ಆಗುತ್ತದೆ. ಉತ್ತರ ಅಮೆರಿಕ ಖಂಡದಲ್ಲಿ ಶೇಕಡ 21ರಷ್ಟು ಬೆಳವಣಿಗೆ ಕಂಡು ಬಂದಿದ್ದರೆ ಚೀನಾದಲ್ಲಿ ಶೇಕಡ 6ರಷ್ಟು ಕುಸಿತ ಕಂಡುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net