INDIA ನಾಯಕಿ ಸಿಎಂ ಮಮತಾ ಬ್ಯಾನರ್ಜಿ?.. ಇದು ಒಳ್ಳೆಯ ಜೋಕ್​ ಎಂದ ಸಂಸದ ಟ್ಯಾಗೋರ್​

INDIA
Published on

ನವದೆಹಲಿ:ಇಂಡಿಯಾ(INDIA) ಮೈತ್ರಿಕೂಟದ ನಾಯಕಿಯಾಗಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಉತ್ತಮರು ಎಂದು ತೃಣ ಮೂಲ ಕಾಂಗ್ರೆಸ್​ನ ನಾಯಕರ ಸಲಹೆಯನ್ನು 'ಇದು ಒಂದು ಉತ್ತಮ ಜೋಕ್​' ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಮತ್ತು ಲೋಕಸಭೆ​ ಸಂಸದ ಮಾಣಿಕ್ಯಂ ಟ್ಯಾಗೋರ್​ ಹೇಳಿದ್ದಾರೆ.

ನವದೆಹಲಿಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ತೃಣ ಮೂಲ ಕಾಂಗ್ರೆಸ್​ ನಾಯಕರ ಸಲಹೆ ಬಗ್ಗೆ ಈಗಾಗಲೇ ಕೇಳಿದ್ದೇನೆ. ಅದು ಒಂದು ಉತ್ತಮ ಜೋಕ್​ ಎಂದು ಬಣ್ಣಿಸಿದ್ದಾರೆ.

ಈ ಮುಂಚೆ ತೃಣಮೂಲ ಕಾಂಗ್ರೆಸ್​ನ ನಾಯಕ ಸಂಸದ ಕೀರ್ತಿ ಅಜಾದ್​​, ನಮ್ಮ ಸಿಎಂ ಇಂಡಿಯಾ ಮೈತ್ರಿ ಕೂಟವನ್ನು ಮುನ್ನಡೆಸಲು ಉತ್ತಮ ಮುಖ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರಿಪೂರ್ಣ ದಾಖಲೆ ಹೊಂದಿದ್ದಾರೆ. ಈಗಾಗಿ ಬಣದ ಸಾರಥ್ಯವನ್ನು ವಹಿಸಲು ಇವರಿಂದ ಸಾಧ್ಯ ಎಂದು ಹೇಳಿದ್ದರು.

ಮುಂದುವರೆಸಿ ಮಾತನಾಡಿದ ಅಜಾದ್​, '' ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಎದುರು ಹಾಕಿಕೊಂಡಾಗಲೆಲ್ಲ ಮೋದಿ ಸೋತಿದ್ದಾರೆ. ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಸೀಟ್​ ಗೆದ್ದರೆ, ನಮ್ಮವರು ಐದು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅಲ್ಲದೇ, ನಮ್ಮ ತೃಣ ಮೂಲ ಕಾಂಗ್ರೆಸ್​ಗೆ ವೋಟ್​ ಬ್ಯಾಂಕ್​​ ಹೆಚ್ಚಿದೆ. ಮಮತಾ ತುಂಬಾ ಹಿರಿಯ ನಾಯಕಿ. ಮೋದಿ ವಿರುದ್ಧ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ, ಇಂಡಿಯಾ ಮೈತ್ರಿಕೂಟಕ್ಕೆ ನಮ್ಮ ನಾಯಕಿಯೆ ಉತ್ತಮ'' ಎಂದು ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಸಿ ಕಾಂಗ್ರೆಸ್​ನ ಸಂಸದ ಟ್ಯಾಗೋರ್​ ತಳ್ಳಿ ಹಾಕಿದ್ದಾರೆ.

ಇಂಡಿಯಾ ಕೂಟದಲ್ಲಿ ಬಿರುಕು?

ಸಂಸತ್​ನಲ್ಲಿ ಇಂದು(ಡಿ.02) ಪ್ರಧಾನಿ ಮೋದಿ ವಿರುದ್ಧ ಗೌತಮ್​ ಅದಾನಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್​ ಮತ್ತು ಮೈತ್ರಿಕೂಟದ ನಾಯಕರು ರಾಜೀನಾಮೆ ಒತ್ತಾಯಿಸಿದರು. ಆದರೆ, ತೃಣಮೂಲ ಕಾಂಗ್ರೆಸ್​ ಮತ್ತು ಸಮಾಜವಾದಿ ಪಕ್ಷದ ಸಂಸದರು ಇದರಿಂದ ದೂರು ಉಳಿದಿದ್ದರು. ಅಲ್ಲದೇ, ಸಂಸದ ಟ್ಯಾಗೂರ್​ ಹೇಳಿಕೆ ಕೂಡ ಇಂಡಿಯಾ ಕೂಟದಲ್ಲಿ ಬಿರುಕಿಗೆ ಪೂರಕ ಎಂಬಂತೆ ತೋರುತ್ತಿದೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net