ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕದಾಟ ಭರ್ಜರಿಯಿಂದ ಸಾಗುತ್ತಿದ್ದು, ಇಂದು ನಡೆದ ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಅದ್ಭುತ ಗೆಲವು ದಾಖಲಿಸುವ ಮೂಲಕ ಇದೀಗ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ಈಗಾಗಲೇ ಮೂರು ಪದಕಗಳನ್ನು ಗೆದ್ದಿರುವ ಭಾರತಕ್ಕೆ ಇನ್ನೊಂದು ಮೆಡಲ್ ಸನ್ನಿಹಿತದಲ್ಲಿದೆ. ಇದು ಭಾರತೀಯರಿಗೆ ಎಲ್ಲಿಲ್ಲದ ಸಂತಸ ಉಂಟುಮಾಡಿದೆ.
ಇದನ್ನೂ ಓದಿ: ಸಾಹಿತಿಗಳು ತಮ್ಮ ಅನುಭವಗಳನ್ನು ದಾಖಲಿಸಬೇಕು : ಸಾಹಿತಿ ಅರವಿಂದ ಮಾಲಗತ್ತಿ
ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಮುತ್ತಿಡುವ ಸಂಭ್ರಮದಲ್ಲಿರುವ ಭಾರತ ಪುರುಷರ ಹಾಕಿ ಪಡೆ, ಇದೀಗ ಸೆಮಿಫೈನಲ್‌ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಇದೆಲ್ಲದರ ಮಧ್ಯೆ ಗೋಲ್ ಕೀಪಿಂಗ್ ಲೆಜೆಂಡ್ ಪಿ.ಆರ್. ಶ್ರೀಜೇಶ್, ಒಲಿಂಪಿಕ್ ಪದಕದಾಟದ ಮೂಲಕ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ. 36 ವರ್ಷದ ಶ್ರೀಜೇಶ್ ಪೋಡಿಯಂ ಮೇಲೆ ತಮ್ಮ ತಂಡದೊಂದಿಗೆ ನಿಂತು, ನಿವೃತ್ತಿ ಘೋಷಿಸಲು ಎದುರುನೋಡುತ್ತಿದ್ದಾರೆ.
THE WINNING MOMENT FROM TEAM INDIA. 🇮🇳
– Down with 10 men, the raw emotions says everything. 🥹❤️pic.twitter.com/FArmg3QtVR
— Mufaddal Vohra (@mufaddal_vohra) August 4, 2024
ಕ್ವಾಟರ್ಫೈನಲ್ನಲ್ಲಿ ಬ್ರಿಟನ್ ವಿರುದ್ಧ ಪಂದ್ಯ ಗೆದ್ದ ಬಳಿಕ ಭಾವುಕರಾದ ಶ್ರೀಜೇಶ್, ತಾವು ಬಳಿಸಿದ ಹಾಕಿ ಸ್ಟಿಕ್ ಅನ್ನು ಕ್ಯಾಮರಾಗೆ ತೋರಿಸುವ ಮೂಲಕ ತಮ್ಮ ಪತ್ನಿಯ ಹೆಸರನ್ನು ಸ್ಟಿಕ್ ಮೇಲೆ ಕೆತ್ತಿಸಿರುವುದನ್ನು ಅನಾವರಣಗೊಳಿಸಿದರು. ತಮ್ಮ ಜೀವನದಲ್ಲಿ ಪತ್ನಿ ಅನೇಶ್ಯಾ ಪಾತ್ರ ಬಹಳ ದೊಡ್ಡದು ಹಾಗೂ ಅತ್ಯಮೂಲ್ಯವಾದದ್ದು ಎಂಬುದನ್ನು ತಿಳಿಸಿದರು. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಗೆದ್ದು ಬನ್ನಿ ಎಂದು ಆಶಿಸಿದ್ದಾರೆ,(ಏಜೆನ್ಸೀಸ್).
ಕಡೆಗೂ ‘ಮಂಜುಮ್ಮೆಲ್ ಬಾಯ್ಸ್’ ಹೃದಯ ಗೆದ್ದ ಇಳಯರಾಜ! ನಿಟ್ಟುಸಿರು ಬಿಟ್ಟ ಚಿತ್ರತಂಡ