ಕಡೆಗೂ ‘ಮಂಜುಮ್ಮೆಲ್ ಬಾಯ್ಸ್’ ಹೃದಯ ಗೆದ್ದ ಇಳಯರಾಜ! ನಿಟ್ಟುಸಿರು ಬಿಟ್ಟ ಚಿತ್ರತಂಡ

ಕೇರಳ: ಇದೇ ವರ್ಷದ ಫೆಬ್ರವರಿ 22ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಮಲಯಾಳಂ ಬ್ಲಾಕ್​ಬಸ್ಟರ್​ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’, ಅಪಾರ ಜನಮನ್ನಣೆ ಗಳಿಸುವುದರ ಜತೆ ಬಾಕ್ಸ್ ಆಫೀಸ್ ದಾಖಲೆಗಳನ್ನು​ ಧೂಳಿಪಟ ಮಾಡಿತು. ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ಈ ಚಿತ್ರವು ಇದೀಗ ಮಾಲಿವುಡ್​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಸದ್ದು ಮಾಡಿದ ಮಂಜುಮ್ಮೆಲ್ ಬಾಯ್ಸ್​, ಕಳೆದ ಕೆಲವು ತಿಂಗಳುಗಳ ಹಿಂದೆ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡ ವಿಷಯ ಎಲ್ಲರಿಗೂ ತಿಳಿದೇ ಇದೆ.

ಇದನ್ನೂ ಓದಿ: ಬಾಂಗ್ಲಾದೇಶ: ಹಿಂಸಾಚಾರಕ್ಕೆ ತಿರುಗಿದ ಪ್ರಧಾನಿ ವಿರುದ್ಧದ ಅಸಹಕಾರ ಚಳುವಳಿ: 32 ಸಾವು

ಈ ಹಿಂದಿನ ದಾಖಲೆಗಳನ್ನು ಪುಡಿ ಪುಡಿ ಮಾಡುವ ಮೂಲಕ ಮಾಲಿವುಡ್​ನಲ್ಲಿ ತನ್ನದೇ ಹೊಸ ದಾಖಲೆ ಬರೆದು, ‘ಇಂಡಸ್ಟ್ರಿ ಹಿಟ್’ ಎಂಬ ಪಟ್ಟ ಪಡೆದಿದ್ದ ಚಿತ್ರವು ತಮಿಳು ನಟ ಕಮಲ್ ಹಾಸನ್ ನಟಿಸಿದ್ದ ‘ಗುಣ’ ಚಿತ್ರದ ಹಾಡೊಂದನ್ನು ಕದ್ದು ಬಳಸಿಕೊಂಡಿದೆ ಎಂದು ಸಂಗೀತ ಮಾಂತ್ರಿಕ, ದಿಗ್ಗಜ ಇಳಯರಾಜ ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರ ತಯಾರಕರಿಗೆ ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಸಿ, ನೋಟಿಸ್ ಕೂಡ ಕಳುಹಿಸಿದ್ದರು.

‘ಗುಣ’ ಚಿತ್ರದ ‘ಕಣ್ಮಣಿ ಅನ್ಬೋದು ಕಾದಲನ್’​ ಹಾಡನ್ನು ತನ್ನ ಅನುಮತಿ ಇಲ್ಲದೆ ಚಿತ್ರತಂಡ ಬಳಸಿಕೊಂಡಿದೆ. ಇದು ಕಾನೂನಿನ ಪ್ರಕಾರವು ತಪ್ಪು ಎಂದು ನೋಟಿಸ್​ ರವಾನಿಸಿದ್ದ ಇಳಯರಾಜ, ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ 2 ಕೋಟಿ ರೂ. ಹಣವನ್ನು ಪರಿಹಾರ ರೂಪದಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರ ಮಾಲಿವುಡ್ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ, ಇದೀಗ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಕಡೆಗೂ ತಮ್ಮ ಕಾನೂನು ಸಮರವನ್ನು ಇಳಯರಾಜ ಈ ಒಂದು ಕಂಡೀಷನ್ ಮೂಲಕ ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಿರಿ

2 ಕೋಟಿ ರೂ. ಅನ್ನು ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದ ಇಳಯರಾಜ, ಚಿತ್ರತಂಡದವರು ತನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡಿದ ಬಳಿಕ ಅಂತಿಮವಾಗಿ 60 ಲಕ್ಷಕ್ಕೆ ಒಪ್ಪಂದವನ್ನು ಇತ್ಯರ್ಥಗೊಳಿಸಿದ್ದಾರೆ. ಈ ಮೂಲಕ ಕಾನೂನಿನ ಹೋರಾಟಕ್ಕೆ ಕಡೆಗೂ ತೆರೆ ಎಳೆದಿದ್ದಾರೆ. ಆರಂಭದಲ್ಲಿ ಪ್ರತಿಭಾವಂತ ತಂಡವನ್ನು ಪ್ರೋತ್ಸಾಹಿಸುವ ಬದಲಿಗೆ ಕಾನೂನು ಹೋರಾಟ ಕೈಗೊಂಡಿದ್ದಕ್ಕಾಗಿ ಸಂಗೀತ ದಿಗ್ಗಜನನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಇದೀಗ ಈ ವಿಷಯ ತಿಳಿದ ಸಿನಿಪ್ರಿಯರು ಜಾಲತಾಣಗಳಲ್ಲಿ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…