ಮ್ಯಾನ್ಮಾರ್ ಭೂಕಂಪ; ಭಾರತದಿಂದ ಭೂಕಂಪ ಪೀಡಿತ ಪ್ರದೇಶಕ್ಕೆ ಸಿ-17 ವಿಮಾನಗಳಲ್ಲಿ ಹೆಚ್ಚಿನ ಮಾನವೀಯ ನೆರವು; Myanmar

myanmar
Published on

Myanmar | ಭಾರತವು ಇಂದು (6) ಭೂಕಂಪ ಪೀಡಿತ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್​ಗೆ ಭಾರತೀಯ ಸೇನಾ ಘಟಕದಿಂದ ಅಗತ್ಯ ದಾಸ್ತಾನು ಸೇರಿದಂತೆ 31 ಟನ್ ಮಾನವೀಯ ನೆರವನ್ನು ಕಳುಹಿಸಿಕೊಟ್ಟಿದೆ. ಮುಂಜಾನೆ ಗಾಜಿಯಾಬಾದ್‌ನ ಹಿಂದನ್ ವಾಯುಪಡೆ ನಿಲ್ದಾಣದಿಂದ ಸಿ-17 ಗ್ಲೋಬ್‌ಮಾಸ್ಟರ್ ಹೆವಿ-ಲಿಫ್ಟ್ ವಿಮಾನ ಅಗತ್ಯ ಸಾಮಗ್ರಿಗಳನ್ನು ಹೊತ್ತೊಯ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಪರೇಷನ್ ಬ್ರಹ್ಮ C-17 ವಿಮಾನವು 31 ಟನ್ ಮಾನವೀಯ ನೆರವಿನೊಂದಿಗೆ ಮಂಡಲೆಗೆ ಹೊರಟಿದೆ, ಇದರಲ್ಲಿ ಭಾರತೀಯ ಸೇನಾ ಕ್ಷೇತ್ರದ ಆಸ್ಪತ್ರೆ ಘಟಕಕ್ಕೆ ಮರುಪೂರಣ ಮಳಿಗೆಗಳು ಸೇರಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಭಾರತೀಯ ಸೇನೆಯು ಮಾ. 29 ರಂದು ಆಗ್ರಾದಿಂದ ಹೊರಟಿದ್ದ ಐಎಎಫ್‌ನ ಎರಡು ಸಿ -17 ಹೆವಿ-ಲಿಫ್ಟ್ ವಿಮಾನಗಳನ್ನು ಬಳಸಿಕೊಂಡು 118 ಸಿಬ್ಬಂದಿಯನ್ನು ಒಳಗೊಂಡ ಆಸ್ಪತ್ರೆ ಘಟಕವನ್ನು ಮ್ಯಾನ್ಮಾರ್‌ನಲ್ಲಿ ನಿರ್ಮಾಣ ಮಾಡಲಾಗಿದೆ.

ಮ್ಯಾನ್ಮಾರ್ ಪರ ನಿಂತ ಭಾರತ:

ದಕ್ಷಿಣ ಕರಾವಳಿ ಪ್ರದೇಶದ ತಿಲಾವಾ ಬಂದರಿನಲ್ಲಿರುವ ಭೂಕಂಪ ಪೀಡಿತ ಪ್ರದೇಶವಾದ ಮ್ಯಾನ್ಮಾರ್‌ಗೆ ಭಾರತ ಬೃಹತ್ ಪ್ರಮಾಣದ ಆಹಾರ ನೆರವನ್ನು ನೀಡಿದೆ. ಮಾರ್ಚ್ 28 ರಂದು ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, 3,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಆಪರೇಷನ್ ಬ್ರಹ್ಮ ಕಾರ್ಯಕ್ರಮದ ಭಾಗವಾಗಿ ಭಾರತ ಆಹಾರದ ನೆರವು ನೀಡಿದೆ.

ಭೂಕಂಪದ ನಂತರ ಕಳೆದು ಹೋದವರಿಗಾಗಿ ಹುಡುಕಾಟ, ರಕ್ಷಣೆ, ನೆರವು, ವಿಪತ್ತು ಪರಿಹಾರ ಮತ್ತು ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಬೆಂಬಲವನ್ನು ಒದಗಿಸಲು ಭಾರತವು ಆಪರೇಷನ್ ಬ್ರಹ್ಮವನ್ನು ಪ್ರಾರಂಭಿಸಿತು. ಭಾರತವು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮ್ಯಾನ್ಮಾರ್‌ಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ತಲುಪಿಸಿತು. ಶನಿವಾರ (5) ಮ್ಯಾನ್ಮಾರ್‌ನಿಂದ ದಕ್ಷಿಣಕ್ಕೆ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ತಿಲಾವಾ ಬಂದರಿನಲ್ಲಿ ನೌಕಾ ಹಡಗಿನ ಮೂಲಕ 442 ಮೆಟ್ರಿಕ್ ಟನ್ ಆಹಾರವನ್ನು ಪೂರೈಕೆ ಮಾಡಿದೆ.

(ಏಜೆನ್ಸೀಸ್)

ಅಕ್ಕಿ, ಅಡುಗೆ ಎಣ್ಣೆ, ನೂಡಲ್ಸ್ ಮತ್ತು ಬಿಸ್ಕತ್ತುಗಳು ಸೇರಿದಂತೆ 442 ಟನ್ ಆಹಾರವನ್ನು ಲ್ಯಾಂಡಿಂಗ್ ಶಿಪ್ ಟ್ಯಾಂಕ್ INS ಘರಿಯಲ್ ಹೊತ್ತೊಯ್ದಿದ್ದು, ಭೂಕಂಪ ಪೀಡಿತ ಜನರ ಅಗತ್ಯಗಳನ್ನು ಪೂರೈಸಲಾಗುತ್ತಿದೆ. 442 ಟನ್​ ಆಹಾರ ನೆರವಿನಲ್ಲಿ 405 ಮೆಟ್ರಿಕ್ ಟನ್ ಅಕ್ಕಿ, 30 ಮೆಟ್ರಿಕ್ ಟನ್ ಅಡುಗೆ ಎಣ್ಣೆ, 5 ಮೆಟ್ರಿಕ್ ಟನ್ ಬಿಸ್ಕತ್ತುಗಳು ಮತ್ತು 2 ಮೆಟ್ರಿಕ್ ಟನ್ ನೂಡಲ್ಸ್​ಅನ್ನು ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net