ಕೆನಡಾ ವಿರುದ್ಧ ಕಠಿಣ ನಿಲುವು ತಳೆದ ಭಾರತ; 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳಲು ಆದೇಶ

canada
Published on

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ವಿವಾದದ ನಡುವೆ ಮತ್ತೊಂದು ಬಿಗ್​​​​​ ನ್ಯೂಸ್​​ ಬಂದಿದೆ. ಕಠಿಣ ನಿಲುವು ತಳೆದಿರುವ ಭಾರತ, ಅಕ್ಟೋಬರ್ 10 ರೊಳಗೆ 41 ರಾಜತಾಂತ್ರಿಕರನ್ನು ವಾಪಸ್ ಕಳುಹಿಸಬೇಕೆಂದು ಕೆನಡಾಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

ಭಾರತದಲ್ಲಿ 62 ರಾಜತಾಂತ್ರಿಕರು 
ಭಾರತದ ಬೇಡಿಕೆಯ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ, ಅಕ್ಟೋಬರ್ 10 ರ ನಂತರ ಉಳಿಯುವ ರಾಜತಾಂತ್ರಿಕರಿಂದ ರಾಜತಾಂತ್ರಿಕ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಎಚ್ಚರಿಸಿದೆ ಎಂದು ಹೇಳಲಾಗಿದೆ. ಕೆನಡಾವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ. ಕೆನಡಾದ ರಾಜತಾಂತ್ರಿಕರ ಒಟ್ಟು ಸಂಖ್ಯೆಯನ್ನು 41ಕ್ಕೆ ಇಳಿಸಬೇಕು ಎಂದು ಭಾರತ ಹೇಳಿದೆ.

ಒಟ್ಟಾವಾದಲ್ಲಿನ ಭಾರತದ ಉಪಸ್ಥಿತಿಗೆ ಹೋಲಿಸಿದರೆ ಕೆನಡಾವು ಹೊಸ ದೆಹಲಿಯಲ್ಲಿನ ತನ್ನ ಹೈ ಕಮಿಷನ್‌ನಲ್ಲಿ ಹೆಚ್ಚಿನ ರಾಜತಾಂತ್ರಿಕ ಉಪಸ್ಥಿತಿಯನ್ನು ಹೊಂದಿದೆ.

ಪ್ರತಿಕ್ರಿಯೆ ನೀಡದ ವಿದೇಶಾಂಗ ಸಚಿವಾಲಯಗಳು 

ಅಂದಹಾಗೆ ಭಾರತ ಮತ್ತು ಕೆನಡಾದ ವಿದೇಶಾಂಗ ಸಚಿವಾಲಯಗಳು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಕೆನಡಾ ಮೊದಲು ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಿತು ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುಂಪುಗಳ ಉಪಸ್ಥಿತಿಯು ನವದೆಹಲಿಯನ್ನು ನಿರಾಶೆಗೊಳಿಸಿದೆ ಎಂದು ಅವರು ಹೇಳಿದರು.

ಹಳಸಿದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ  

ಕೆನಡಾದಲ್ಲಿ ಜೂನ್‌ನಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕ ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಪಾತ್ರವಿದೆ ಎಂಬ ಕೆನಡಾದ ಅನುಮಾನದ ಮೇಲೆ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಗಂಭೀರವಾಗಿ ಹಳಸಿವೆ. ಭಾರತ ಈ ಆರೋಪವನ್ನು ಅಸಂಬದ್ಧ ಎಂದು ತಳ್ಳಿಹಾಕಿದೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು. ಆದರೆ ಭಾರತವು ಟ್ರುಡೊ ಅವರ ಈ ಹೇಳಿಕೆಯನ್ನು ತಿರಸ್ಕರಿ ಸಿದ್ದಲ್ಲದೆ ಅವುಗಳನ್ನು ಅಸಂಬದ್ಧ ಮತ್ತು ಪ್ರೇರಿತ ಎಂದು ಕರೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net