More

    ಅಪ್ಪನಿಗೆ 31 ವರ್ಷ ಜೈಲು, ಅದರ ಬೆನ್ನಿಗೆ ಮಗನಿಗೂ ಭಯೋತ್ಪಾದಕ ಪಟ್ಟ!

    ನವದೆಹಲಿ: ಅಪ್ಪನಿಗೆ 31 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಿಗೇ ಮತ್ತೊಂದು ಘೋಷಣೆ ಹೊರಬಿದ್ದಿದ್ದು, ಆ ಮೂಲಕ ಮಗನಿಗೆ ಭಯೋತ್ಪಾದಕ ಪಟ್ಟ ಅಧಿಕೃತವಾಗಿದೆ. ಇಂಥದ್ದೊಂದು ಮಹತ್ವದ ಆದೇಶವನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ.

    ಮುಂಬೈನಲ್ಲಿ 2008ರ ನವೆಂಬರ್​ 26ರಂದು ನಡೆದು ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್​ ಸಯೀದ್​ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ನಿನ್ನೆಯಷ್ಟೇ 31 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪನ್ನು ನೀಡಿತ್ತು.

    ಇದನ್ನೂ ಓದಿ: ರಾತ್ರಿ ನಾಟಕಗಳಿಗೂ ಸಂಚಕಾರ?; ಲೌಡ್​ ಸ್ಪೀಕರ್​ ವಿವಾದದ ಮತ್ತೊಂದು ಮಗ್ಗಲು..

    ಇದರ ಬೆನ್ನಿಗೇ ಭಾರತದ ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅನ್ವಯ ಹಫೀಜ್​ ಸಯೀದ್ ಪುತ್ರ ಹಫೀಜ್​ ತಲ್ಹಾ ಘೋಷಿತ ಉಗ್ರ ಎಂದು ನಿರ್ಣಯ ಹೊರಡಿಸಿದೆ.

    ಇದನ್ನೂ ಓದಿ: ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

    ಹಫೀಜ್ ತಲ್ಹಾ ಉಗ್ರ ಸಂಘಟನೆ ಲಷ್ಕರ್​ ಈ ತೈಬಾದ ಹಿರಿಯ ನಾಯಕನಾಗಿದ್ದು, ಈತ ಭಾರತದಲ್ಲಿ ಉಗ್ರ ದಾಳಿಯನ್ನು ನಿರ್ವಹಿಸುವ, ಯೋಜಿಸುವ, ಅದಕ್ಕಾಗಿ ನೇಮಕಾತಿ ಹಾಗೂ ಹಣ ಸಂಗ್ರಹದಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ವಿವರಣೆ ನೀಡಿ ಉಗ್ರ ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

    26/11 ದಾಳಿಯ ಮಾಸ್ಟರ್​ಮೈಂಡ್​​ಗೆ 31 ವರ್ಷ ಜೈಲುಶಿಕ್ಷೆ!

    ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts