

ಬರ್ಮಿಂಗ್ಹ್ಯಾಮ್: ಇಲ್ಲಿನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ನೇತೃತ್ವದ ಟೀಮ್ ಇಂಡಿಯಾವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಶೋಯೆಬ್ ಮಲಿಕ್ (41 ರನ್, 36 ಎಸೆತ, 1 ಬೌಂಡರಿ, 2 ಸಿಕ್ಸರ್), ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಭಾರತದ ಪರ ರಾಹುಲ್ ಶುಕ್ಲಾ (4-0-31-0), ಅನುರೀತ್ ಸಿಂಗ್ (4-0-43-3), ವಿನಯ್ ಕುಮಾರ್ (4-0-36-1), ಪವನ್ ನೇಗಿ (4-0-24-1), ಹರ್ಭಜನ್ ಸಿಂಗ್ (1-0-8-0), ಇರ್ಫಾನ್ ಪಠಾಣ್ (3-0-12-1) ರನ್ ನೀಢಿ ವಿಕೆಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ಭಾರತ ತಂಡವು ಆರಂಭಿಕ ಅಂಬಾಟಿ ರಾಯುಡು (50 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್), ಯೂಸುಫ್ ಪಠಾಣ್ (30 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ಗೆದ್ದು ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.
ಪಾಕಿಸ್ತಾನದ ಪರ ಆಮೀರ್ ಯಾಮೀನ್ (3-0-29-2), ಸೋಹೈಲ್ ತನ್ವೀರ್ (3.1-0-28-0), ಸೋಹೈಲ್ ಖಾನ್ (2-0-18-0), ಶಾಹಿದ್ ಅಫ್ರಿದಿ (2-0-15-0), ಸೈಯೀದ್ ಅಜ್ಮಲ್ (4-0-25-1), ವಹಾಬ್ ರಿಯಾಜ್ (3-0-22-1), ಶೋಯೆಬ್ ಮಲಿಕ್ (2-0-17-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.