Narendra Modi In Japan: ಭಾರತ ಮತ್ತು ಜಪಾನ್​ ಸಹಯೋಗದೊಂದಿಗೆ ಚಂದ್ರಯಾನ 5 ಕಾರ್ಯಚರಣೆ; ಟೋಕಿಯೊದಲ್ಲಿ ಪ್ರಧಾನಿ ಮೋದಿ ಘೋಷಣೆ!

Narendra Modi In Japan
Published on

Narendra Modi In Japan: ಮುಂಬರುವ ಚಂದ್ರಯಾನ -5 ಕಾರ್ಯಾಚರಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ನಡುವಿನ ಸಹಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಆಗಸ್ಟ್​ 29) ಘೋಷಿಸಿದ್ದಾರೆ.

ಜಪಾನ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗಿನ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರು ಭಾರತ ಮತ್ತು ಜಪಾನ್ ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಸಹಯೋಗವನ್ನು ಘೋಷಿಸಿದರು.ಈ ವೇಳೆ ಮಾತನಾಡುತ್ತಾ, ಏಷ್ಯಾದ ಎರಡು ಪ್ರಜಾಪ್ರಭುತ್ವ ದೇಶಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರ ಮತ್ತು ವೈಜ್ಞಾನಿಕ ಪಾಲುದಾರಿಕೆಯನ್ನು ಎತ್ತಿ ತೋರಿಸಿದರು.

ಉಭಯ ನಡುವಿನ ಬಲವಾದ ಮತ್ತು ಸ್ನೇಹಪರ ಸಂಬಂಧಗಳನ್ನು ಮತ್ತು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುವ ಅವರ ಹಂಚಿಕೆಯ ಬದ್ಧತೆಯನ್ನು ಉಲ್ಲೇಖಿಸುತ್ತಾ, ಸಂಸದೀಯ ವಿನಿಮಯವನ್ನು ಆಳಗೊಳಿಸುವುದು, ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಹೆಚ್ಚಿಸುವುದು ಮತ್ತು ದ್ವಿಪಕ್ಷೀಯ ಸೌಹಾರ್ದತೆಯನ್ನು ಬಲಪಡಿಸುವ ಸಾಂಸ್ಕೃತಿಕ ಸಂಪರ್ಕಗಳನ್ನು ಬೆಳೆಸುವ ಬಗ್ಗೆ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎನ್ನಲಾಗಿದೆ.

ಈ ಹಿಂದಿನ ಚಂದ್ರಯಾನ ಯೋಜನೆಗಳ ಯಶಸ್ಸಿನ ನಂತರದ ಭಾರತದ ಮುಂದಿನ ಮಿಷನ್ ಚಂದ್ರಯಾನ-5, ಚಂದ್ರನ ಮೇಲ್ಮೈ ಮತ್ತು ಪರಿಸರದ ವೈಜ್ಞಾನಿಕ ತಿಳುವಳಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಜಪಾನ್ ಜೊತೆಗಿನ ಪಾಲುದಾರಿಕೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನಾ ಪರಿಣತಿಯನ್ನು ಬಳಸಿಕೊಳ್ಳಲು ಮಿಷನ್‌ಗೆ ಅನುವು ಮಾಡಿಕೊಡುತ್ತದೆ.

ಚಂದ್ರಯಾನ-5 ಎಂದರೇನು?

ಈ ಕಾರ್ಯಾಚರಣೆಯಲ್ಲಿ ಭಾರತ ನಿರ್ಮಿತ ಲ್ಯಾಂಡರ್ ಮತ್ತು ಜಪಾನ್ ನಿರ್ಮಿತ ರೋವರ್ ಇರಲಿದ್ದು, ಇದುವರೆಗೆ ಚಂದ್ರನ ಮೇಲ್ಮೈಯಲ್ಲಿ ನಿಯೋಜಿಸಲಾದ ಅತ್ಯಂತ ಭಾರವಾದ ರೋವರ್ ಆಗುವ ನಿರೀಕ್ಷೆಯಿದೆ. ಇದನ್ನು ಜಪಾನ್‌ನಿಂದ ಚಂದ್ರನಿಗೆ ಉಡಾವಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಎರಡು ದೇಶಗಳ ಧ್ಯೇಯವು ಪ್ರಾದೇಶಿಕ ಸ್ಥಿರತೆ ಮತ್ತು ಜಾಗತಿಕ ನಾವೀನ್ಯತೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿರುವ ದೊಡ್ಡ ಇಂಡೋ-ಜಪಾನೀಸ್ ಮೈತ್ರಿಕೂಟದ ಸಂಕೇತವಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net