Independence Day: ರಾಜ್ಯದ 19 ಪೊಲೀಸ್​ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

State Police
Published on

ನವದೆಹಲಿ: ಪೊಲೀಸ್​ ಇಲಾಖೆಗೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 1037 ಸೇವಾ ಪದಕವನ್ನು ಕೇಂದ್ರ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿಗೆ ಘೋಷಣೆ ಮಾಡಲಾಗಿದ್ದು, ಇದರಲ್ಲಿ 208 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌರ್ಯ ಪ್ರಶಸ್ತಿಗೆ (Police Medal for Gallantry) ಭಾಜನರಾಗಿದ್ದರೆ.

ಕರ್ನಾಟಕದ ರಾಜ್ಯದ 19 ಪೊಲೀಸ್‌ ಅಧಿಕಾರಿಗಳು ರಾಷ್ಟ್ರಪತಿಯವರು ಪ್ರದಾನ ಮಾಡುವ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಐಪಿಎಸ್​ ಅಧಿಕಾರಿ ಚಂದ್ರಶೇಖರ್​ ಎಂ (ಎಡಿಜಿಪಿ, ಐಎಸ್​ಡಿ, ಬೆಂಗಳೂರು) ಅವರು ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಉಳಿದ 18 ಪೊಲೀಸ್​ ಅಧಿಕಾರಿಗಳು ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.

1. ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ

2. ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ

3. ರಾಮಗೊಂಡ ಬಿ ಬಸರಗಿ, ಎಎಸ್‌ಪಿ, ಬಳ್ಳಾರಿ ಜಿಲ್ಲೆ

4. ಎಂ.ಡಿ. ಶರತ್​, ಪೊಲೀಸ್​ ಅಧೀಕ್ಷಕರು, ಸಿಐಡಿ, ಬೆಂಗಳೂರು

5. ವಿ.ಸಿ. ಗೋಪಾಲರೆಡ್ಡಿ, ಡಿಸಿಪಿ, ಸಿಆರ್​, ಪಶ್ಚಿಮ, ಬೆಂಗಳೂರು ನಗರ

6. ಗಿರಿ ಕೆ.ಸಿ, ಡಿವೈಎಸ್‌ಪಿ, ಚನ್ನಪಟ್ಟಣ ಉಪ-ವಿಭಾಗ, ರಾಮನಗರ ಜಿಲ್ಲೆ

7. ಮುರಳೀಧರ್ ಪಿ, ಡಿವೈಎಸ್‌ಪಿ, ಚಿಂತಾಮಣಿ ಉಪ-ವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ

8. ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್, ರಾಜ್ಯ ಗುಪ್ತವಾರ್ತೆ, ಕಲಬುರಗಿ

9. ಕೆ. ಬಸವರಾಜು, ಡಿವೈಎಸ್‌ಪಿ, ಐಎಸ್​ಡಿ, ಕಲಬುರಗಿ

10. ರವೀಶ್ ನಾಯಕ್, ಎಸಿಪಿ, ಸಿಸಿಆರ್​ಬಿ, ಮಂಗಳೂರು ನಗರ

11. ಎನ್​. ಮಹೇಶ್​, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು

12. ಪ್ರಭಾಕರ್ ಜಿ, ಎಸಿಪಿ, ಸಂಚಾರ ಯೋಜನೆ, ಬೆಂಗಳೂರು ನಗರ

13. ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್, 11ನೇ ಪಡೆ, ಕೆಎಸ್​ಆರ್​ಪಿ, ಹಾಸನ

14. ಮಂಜುನಾಥ ಎಸ್​. ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್, ಎಫ್​ಪಿಬಿ, ದಾವಣಗೆರೆ

15. ಎಸ್. ಮಂಜುನಾಥ, ಆರ್​ಪಿಐ, 3ನೇ ಪಡೆ, ಕೆಎಸ್​ಆರ್​ಪಿ, ಬೆಂಗಳೂರು

16. ಗೌರಮ್ಮ ಜಿ., ಎಎಸ್ಐ, ಸಿಐಡಿ, ಬೆಂಗಳೂರು

17. ಮಹಬೂಬಸಾಹೇಬ ಎನ್​ ಮುಜಾವರ್​, ಸಿಎಚ್​ಸಿ, ಮನಗುಳಿ ಪೊಲೀಸ್​ ಠಾಣೆ, ವಿಜಯಪುರ ಜಿಲ್ಲೆ

18. ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್, ಡಿಸಿಆರ್​ಬಿ, ಉಡುಪಿ

Independance Day Medal_page-0001
Independance Day Medal_page-0002
Independance Day Medal_page-0003
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net