ಇಂದಬೆಟ್ಟು ಶಾಲೆಯಲ್ಲಿ ವಾರ್ಷಿಕ ಶಿಬಿರ

Published on

ಬೆಳ್ತಂಗಡಿ: ಬಂಗಾಡಿಯ ಇಂದಬೆಟ್ಟು(ಕಲ್ಲಾಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಉಜಿರೆ ಶ್ರೀ ಧ.ಮಂ. ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದಲ್ಲಿ, ಐದನೇ ದಿನ ದೇಸಿ ಮತ್ತು ಸಾಂಪ್ರದಾಯಿಕ ದಿನದ ಆಚರಣೆ ಮತ್ತು ಮಹತ್ವ ಕುರಿತು ಪ್ರಶಿಕ್ಷಣ ಕಾರ್ಯಕ್ರಮ ನಡೆಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ಹಿರಿಯ ಸ್ವಯಂಸೇವಕ ಧನುಷ್ ಕೆ.ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ಪ್ರಾಸ್ತಾವಿಕ ಮಾತನಾಡಿದರು. ಯೋಜನಾಧಿಕಾರಿ ಪ್ರೊ.ದೀಪ ಆರ್.ಪಿ, ಶಿಬಿರಾಧಿಕಾರಿಗಳಾದ ಅಮಿತ್ ಕುಮಾರ್ ಮತ್ತು ಶ್ರುತಿ ಮಣಕೀಕರ್ ಹಾಗೂ ಹಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು. ಹಿರಿಯ ಸ್ವಯಂಸೇವಕಿ ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net