ಟಿ20 ವಿಶ್ವಕಪ್​: ಯುಎಸ್​ಎ ವಿರುದ್ಧ ಭಾರತ ಗೆಲ್ಲಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದೆ ಪಾಕಿಸ್ತಾನ!

2 Min Read
India vs Pakistan

ನ್ಯೂಯಾರ್ಕ್​: ಟಿ20 ವಿಶ್ವಕಪ್‌ನ ಭಾಗವಾಗಿ ಟೀಮ್ ಇಂಡಿಯಾ ತನ್ನ ಮೂರನೇ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಈಗಾಗಲೇ ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಜಯಗಳಿಸಿರುವ ರೋಹಿತ್ ಸೇನೆ, ಗ್ರೂಪ್-ಎ ನಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಸೂಪರ್ 8 ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ಇಂದು ಯುಎಸ್​ಎ ತಂಡವನ್ನು ಭಾರತ ಎದುರಿಸಲಿದೆ.

ಯುಎಸ್ಎ ತಂಡ ಭಾರತಕ್ಕೆ ಇದು ದೊಡ್ಡ ಸವಾಲೇನಲ್ಲ. ಆದರೆ, ಪಾಕಿಸ್ತಾನವನ್ನು ಸೋಲಿಸಿದ ಯುಎಸ್ಎ ತಂಡವನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಾರೆ. ಅಲ್ಲದೆ, ಪಂದ್ಯ ನಡೆಯುವ ಪಿಚ್‌ ಬಗ್ಗೆಯೂ ಕ್ರೀಡಾಭಿಮಾನಿಗಳಲ್ಲಿ ಭಯವಿದೆ. ಯುಎಸ್​ಎ ತವರು ಮೈದಾನ ಆಗಿರುವುದರಿಂದ ಯಾವುದನ್ನು ನಿರ್ಲಕ್ಷಿಸುವಂತಿಲ್ಲ. ಸಾಕಷ್ಟು ಬ್ಯಾಟ್ಸ್​ಮನ್​ಗಳನ್ನು ಹೊಂದಿರುವ ಟೀಮ್​ ಇಂಡಿಯಾ, ನ್ಯೂಯಾರ್ಕ್​ನ ನಸ್ಸೌ ಪಿಚ್​ನಲ್ಲಿ ಪಾಕಿಸ್ತಾನ ವಿರುದ್ಧ 120 ರನ್ ಗಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ ಕೂಡ ಕಡಿಮೆ ರನ್ ಗಳಿಸಿರುವುದು ಮತ್ತು ಪಾಕಿಸ್ತಾನ ವಿರುದ್ಧ ಯುಎಸ್​ಎ ಗೆಲುವು ದಾಖಲಿಸಿರುವುದು ಅಭಿಮಾನಿಗಳನ್ನು ಚಿಂತೆಗೆ ದೂಡಿದೆ. ಇದೀಗ ಅಮೆರಿಕ ವಿರುದ್ಧ ಭಾರತ ಖಂಡಿತಾ ಗೆಲ್ಲಲಿ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಿಂತ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಆದರೆ, ಅದಕ್ಕೊಂದು ಕಾರಣ ಇದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಉಭಯ ತಂಡಗಳು ಸಾಂಪ್ರದಾಯಿಕ ಎದುರಾಳಿಗಳು ಎಂಬುದು ಜಗತ್ತಿಗೆ ಗೊತ್ತಿದೆ. ಇಬ್ಬರ ನಡುವಿನ ಪಂದ್ಯ ಒಂದು ರೀತಿಯಲ್ಲಿ ಮಿನಿ ವಾರ್‌ನಂತೆ. ಪಾಕಿಸ್ತಾನಿಗಳಿಗೆ ಭಾರತ ಗೆಲ್ಲುವುದು ಬೇಕಾಗಿಲ್ಲ ಮತ್ತು ಭಾರತೀಯರು ತಮ್ಮ ಕನಸಿನಲ್ಲಿಯೂ ಪಾಕಿಸ್ತಾನವನ್ನು ಗೆಲ್ಲಲು ಬಯಸುವುದಿಲ್ಲ. ಆದರೆ, ಈಗ ಪಾಕಿಸ್ತಾನಕ್ಕೆ ಟೀಮ್​ ಇಂಡಿಯಾ ಗೆಲುವಿನ ಅಗತ್ಯವಿದೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸೂಪರ್ 8 ಭರವಸೆಯನ್ನು ಜೀವಂತವಾಗಿರಿಸಲು ಭಾರತ ಯುಎಸ್​ಎ ವಿರುದ್ಧ ಗೆಲ್ಲುವ ಅಗತ್ಯವಿದೆ. ಅದಕ್ಕಾಗಿಯೇ ಈಗ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಜೊತೆಗೆ, ಪಾಕಿಸ್ತಾನಿ ಕ್ರಿಕೆಟಿಗರು ಕೂಡ ಭಾರತವನ್ನು ಗೆಲ್ಲಬೇಕೆಂದು ಬಯಸುತ್ತಾರೆ.

See also  ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ತೈಲ ದರ ಇಳಿಕೆಗೆ ಸರ್ಕಾರದ ಚಿಂತನೆ

ಭಾರತದ ವಿರುದ್ಧ ಅಮೆರಿಕ ಗೆದ್ದರೆ ಪಾಕಿಸ್ತಾನ ಬಹುತೇಕ ಮನೆಗೆ ಹೋಗಲಿದೆ. ಏಕೆಂದರೆ ಅಮೆರಿಕದ ನಂತರ ಭಾರತಕ್ಕೆ ಕೆನಡಾ ವಿರುದ್ಧ ಪಂದ್ಯವಿದೆ. ಈ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ, ಟೀಮ್​ ಇಂಡಿಯಾ ಸೂಪರ್ 8ಗೆ ಹೋಗುತ್ತದೆ. ಮತ್ತೊಂದೆಡೆ ಯುಎಸ್​ಎ ಕೂಡ ಎರಡು ಪಂದ್ಯಗಳಲ್ಲಿ ಈಗಾಗಲೇ ಗೆಲುವು ಸಾಧಿಸಿದೆ. ಯುಎಸ್ಎ, ಭಾರತ ವಿರುದ್ಧ ಮತ್ತು ನಂತರ ಐರ್ಲೆಂಡ್ ವಿರುದ್ಧ ಆಡಲಿದೆ. ಒಂದು ವೇಳೆ ಭಾರತದ ವಿರುದ್ಧ ಅಮೆರಿಕ ಸೋತರೆ ಕೊನೆಯ ಪಂದ್ಯವನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಅಮೆರಿಕ ಸೋತು, ಪಾಕಿಸ್ತಾನ ತನ್ನ ಉಳಿದೆರಡು ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ ಮತ್ತು ಅಮೆರಿಕ ಎರಡೆರಡು ಗೆಲುವಿನೊಂದಿಗೆ ಸಮಬಲ ಸಾಧಿಸಲಿವೆ. ಬಳಿಕ ರನ್ ರೇಟ್ ಆಧರಿಸಿ ತಂಡವು ಸೂಪರ್ 8ಕ್ಕೆ ಮುನ್ನಡೆಯುತ್ತದೆ.

ಹೇಗೋ ಭಾರತ ಕೆನಡಾ ವಿರುದ್ಧ ಗೆದ್ದು ಇಂದು ಅಮೆರಿಕ ವಿರುದ್ಧವೂ ಗೆದ್ದರೆ, ಪಾಕಿಸ್ತಾನದ ಹಣೆಬರಹ ಐರ್ಲೆಂಡ್ ವಿರುದ್ಧ ಅಮೆರಿಕ ಪಂದ್ಯದ ಮೇಲೆ ನಿಲ್ಲುತ್ತದೆ. ಪರಿಸ್ಥಿತಿ ಆ ಹಂತಕ್ಕೆ ಹೋಗಬೇಕಾದರೆ ಈಗ ಭಾರತ ಗೆಲ್ಲಲೇ ಬೇಕು. ಪಾಕಿಸ್ಥಾನ ಬಯಸುವುದು ಅದನ್ನೇ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಭಾರತದ ಗೆಲುವು ಅನಿವಾರ್ಯವಾಗಿದೆ. (ಏಜೆನ್ಸೀಸ್​)

ಭಾರತದ ವಿರುದ್ಧ ಸೋಲುಂಡ ಪಾಕಿಸ್ತಾನಕ್ಕೆ ಸೂಪರ್​ 8 ಹಂತ ತಲುಪಲು ಭಾರತದ ಸಹಾಯವೇ ಬೇಕಿದೆ!

ಇಷ್ಟೆಲ್ಲ ತಪ್ಪುಗಳಾದ್ರೂ ಎಚ್ಚೆತ್ತುಕೊಳ್ಳದ ದರ್ಶನ್ ಕೊನೆಗೆ ಬಂದು ನಿಂತಿದ್ದು ಮಾತ್ರ ಇಲ್ಲಿಗೆ! ದಚ್ಚು ವಿವಾದಗಳ ಕಂಪ್ಲೀಟ್ ಸ್ಪೋರಿ​​

Share This Article