IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ಅವೇಶ್ ಖಾನ್! ಯಾರ ಬದಲಿಗೆ?

ವಿಜಯವಾಣಿ - 2023-12-29T123253.614
Published on

ಹೊಸದಿಲ್ಲಿ: ಪುರುಷರ ಆಯ್ಕೆ ಸಮಿತಿಯು ಮೊಹಮ್ಮದ್ ಶಮಿ ಬದಲಿಗೆ ಇದೀಗ ಅವೇಶ್​ ಖಾನ್​ ಅವರನ್ನು ಆಯ್ಕೆ ಮಾಡಿದ್ದು, 2024ರ ಜನವರಿ 3ರಿಂದ 7ರವರೆಗೆ ಕೇಪ್ ಟೌನ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ಶಮಿ ಜಾಗದಲ್ಲಿ ಆವೇಶ್ ಆಡಲಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ.

ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಕಡೆಯ ಟೆಸ್ಟ್‌ಗೆ ಬಲಗೈ ವೇಗಿ ಅವೇಶ್ ಖಾನ್ ಇದೀಗ ಭಾರತ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ಗಾಯದಿಂದಾಗಿ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ ಚೇತರಿಕೆಗೊಂಡು ತಂಡಕ್ಕೆ ಮರಳಲಿದ್ದಾರಾ? ಎಂಬ ಗೊಂದಲ ಹಲವರಲ್ಲಿ ಮೂಡಿತ್ತು. ಇದೀಗ ಬಿಸಿಸಿಐ ಶಮಿಗೆ ರೆಸ್ಟ್​ ಕೊಟ್ಟಿದ್ದು, ಅವರ ಬದಲಿಗೆ ಅವೇಶ್ ಅವರನ್ನು ತಂಡಕ್ಕೆ ಸೇರಿಸಿದೆ.

2ನೇ ಟೆಸ್ಟ್‌ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಅವೇಶ್ ಖಾನ್,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net