ಟೀಮ್ ಇಂಡಿಯಾಗೆ ಅಭಿಷೇಕ್​ ಬಲ! ಸ್ಟಾರ್​ ಬ್ಯಾಟರ್​ನನ್ನು ಕೊಂಡಾಡಿದ ಶ್ರೀಲಂಕಾ ದಿಗ್ಗಜ ಕ್ರಿಕೆಟಿಗ | IND vs PAK Final

ವಿಜಯವಾಣಿ (4)
Published on

IND vs PAK Final: ಇದೇ ಭಾನುವಾರ (ಸೆ.28) ನಡೆಯಲಿರುವ ಏಷ್ಯಾಕಪ್​ ಟಿ20 ಟೂರ್ನಿಯ ಅಂತಿಮ ಕಾಳಗದಲ್ಲಿ ಟೀಮ್ ಇಂಡಿಯಾ ಪಾಕ್ ಜತೆಗೆ ಸೆಣಸಲಿದ್ದು, ಮೂರನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಲು ಎದುರುನೋಡುತ್ತಿದೆ. ಏಷ್ಯಾಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಇಷ್ಟಲ್ಲದೇ, ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಪರಸ್ಪರ ಎದುರಾಗುತ್ತಿರುವುದು ಸಹ ಇದೇ ಮೊದಲು.

ಇನ್ನು ನಿನ್ನೆಯ ಸೂಪರ್​ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಜಯ ಸಾಧಿಸಿದ ಭಾರತ, ಇದೀಗ ಫೈನಲ್​ನಲ್ಲಿ ಪಾಕಿಸ್ತಾನವನ್ನು ಮೂರನೇ ಬಾರಿಗೆ ಮಣಿಸಲು ತುದಿಗಾಲಿನಲ್ಲಿ ನಿಂತಿದೆ. ಸೂಪರ್ ಓವರ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆಗೆ ಶುಭಕೋರಿದ ಶ್ರೀಲಂಕಾ ತಂಡದ ಹೆಡ್​ ಕೋಚ್​ ಸನತ್ ಜಯಸೂರ್ಯ, ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್​ ಅಭಿಷೇಕ್ ಶರ್ಮರನ್ನು ಹಾಡಿ ಹೊಗಳಿದ್ದಾರೆ.

"ಆತ ತನ್ನ ಆಟವನ್ನು ಅಚ್ಚುಕಟ್ಟಾಗಿ ಆಡುತ್ತಿದ್ದಾನೆ. ಇದೇ ಸಮಯದಲ್ಲಿ ತಮ್ಮ ತಂಡದಿಂದ ಉತ್ತಮ ಸಾಥ್ ಕೂಡ ಪಡೆಯುತ್ತಿದ್ದಾರೆ. ಅಭಿಷೇಕ್ ಶರ್ಮ ಓರ್ವ ಅತ್ಯುತ್ತಮ ಬ್ಯಾಟರ್​. ಯಾರು ನ್ಯಾಚುರಲ್ ಆಗಿ ಆಟವನ್ನು ಆಡುತ್ತಾರೋ ಅಂತಹ ಆಟಗಾರರಿಗೆ ಇದೇ ರೀತಿ ಪ್ರದರ್ಶನ ತೋರುವಂತೆ ಪ್ರೋತ್ಸಾಹಿಸಬೇಕು. ಯಾವಾಗ ಮಂದಗತಿಯಲ್ಲಿ ಸಾಗಬೇಕು, ಬೇಡ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಮೊದಲ 6 ಓವರ್​ಗಳ ನಂತರ ತಾನು ಅಬ್ಬರದ ಬ್ಯಾಟಿಂಗ್ ನಡೆಸಬೇಕು ಎಂದು ನಿರ್ಧರಿಸಿದರೆ, ಖಂಡಿತ ಅಭಿಷೇಕ್ ಆಡುತ್ತಾರೆ" ಎಂದರು.

"ದಿನ ಕಳೆದಂತೆ ಅಭಿಷೇಕ್ ಬ್ಯಾಟಿಂಗ್​ನಲ್ಲಿ ಒಳ್ಳೆಯ ಬೆಳವಣಿಗೆ ಕಾಣಿಸುತ್ತಿದೆ. ಇದು ಹೀಗೆ ಮುಂದುವರಿಯಬೇಕು. ಇದರೊಟ್ಟಿಗೆ ಅವರ ಕೋಚ್​ ಕೂಡ ಯುವ ಓಪನರ್​ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಈ ಸಮಯದಲ್ಲಿ ಅದು ಅಗತ್ಯ" ಎಂದು ಹಾಡಿ ಹೊಗಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net