'ಕ್ರಿಕೆಟ್​ ದೇವರ' ದಾಖಲೆ ಮುರಿದ ಜೋ ರೂಟ್​! ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರಿವರು | IND vs ENG

ವಿಜಯವಾಣಿ (89)
Published on

IND vs ENG Test: ಪ್ರಸಕ್ತ ಇಂಗ್ಲೆಂಡ್ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸದ್ಯ ಭಾರತ ಮುಂದಿದೆ. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ನೀಡಿರುವ 471 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿರುವ ಆಂಗ್ಲರು, ಈಗಾಗಲೇ ಮೂರು ವಿಕೆಟ್​ಗಳನ್ನು ಕಳೆದುಕೊಂಡು 209 ರನ್ ಗಳಿಸಿದ್ದಾರೆ. ಈ ವೇಳೆ ಕಣಕ್ಕಿಳಿದ ಇಂಗ್ಲೆಂಡ್​ನ ಸ್ಟಾರ್​ ಬ್ಯಾಟರ್​ ಜೋ ರೂಟ್​, ಸಚಿನ್ ತೆಂಡೂಲ್ಕರ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಮತ್ತೊಂದು ಅಪರೂಪದ ದಾಖಲೆಯನ್ನು ದಾಖಲಿಸಿರುವ ಜೋ ರೂಟ್​, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಲೀಡ್ಸ್‌ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರೂಟ್ ಈ ಸಾಧನೆಗೈದಿರುವುದು ವಿಶೇಷ. ಇಂಗ್ಲೆಂಡ್‌ ಅಂಗಳದಲ್ಲಿ ಒಟ್ಟು ಟೆಸ್ಟ್‌ ಪಂದ್ಯಗಳನ್ನಾಡಿರುವ ರೂಟ್, ಇದುವರೆಗೆ 1,589 ರನ್ ದಾಖಲಿಸಿದ್ದಾರೆ.

ಈ ಮೊದಲು, ಈ ದಾಖಲೆ ಭಾರತೀಯ ಕ್ರಿಕೆಟ್ ದಂತಕಥೆ, ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ ಇಂಗ್ಲೆಂಡ್ ವಿರುದ್ಧ 1,575 ರನ್ ಗಳಿಸಿದ್ದಾರೆ. ರೂಟ್​ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದು, ತಮ್ಮ ಹೆಸರನ್ನು ಅಗ್ರಸ್ಥಾನಕ್ಕೆ ತಂದಿದ್ದಾರೆ. ಆದಾಗ್ಯೂ, ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರೂಟ್ ತಮ್ಮ ಛಾಪು ಮೂಡಿಸುವಲ್ಲಿ ಎಡವಿದರು. ಟೀಮ್ ಇಂಡಿಯಾ ಬೌಲಿಂಗ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ ಅವರ ಓವರ್​ನಲ್ಲಿ ವಿಕೆಟ್​ ಕಳೆದುಕೊಂಡ ರೂಟ್​, ಕೇವಲ 28 ರನ್‌ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಆಂಗ್ಲರ ನೆಲದಲ್ಲಿ ಭಾರತ-ಇಂಗ್ಲೆಂಡ್​ ನಡುವಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಿವರು

1. ಜೋ ರೂಟ್ (ಇಂಗ್ಲೆಂಡ್) – 1579* ರನ್​

2. ಸಚಿನ್ ತೆಂಡೂಲ್ಕರ್ (ಭಾರತ) – 1575 ರನ್​

3. ರಾಹುಲ್ ದ್ರಾವಿಡ್ (ಭಾರತ) – 1376 ರನ್​

4. ಅಲಸ್ಟೈರ್ ಕುಕ್ (ಇಂಗ್ಲೆಂಡ್) – 1196 ರನ್​

6. ಸುನಿಲ್ ಗವಾಸ್ಕರ್ (ಭಾರತ) – 1152 ರನ್​

6. ಗ್ರಹಾಂ ಗೂಚ್ (ಇಂಗ್ಲೆಂಡ್) – 1134 ರನ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net