

IND vs ENG Test: ಆಂಗ್ಲರ ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಪಡೆ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಬರ್ಮಿಂಗ್ಹ್ಯಾಮ್ನಲ್ಲಿ ಪ್ರಾರಂಭವಾಗಿರುವ ಎರಡನೇ ಟೆಸ್ಟ್ ಮ್ಯಾಚ್ನಲ್ಲಿ ತಂಡದ ಪರ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.
ಎರಡನೇ ಟೆಸ್ಟ್ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿದಿರುವ ಟೀಮ್ ಇಂಡಿಯಾಗೆ ಆರಂಭಿಕ ಬ್ಯಾಟರ್ ಜೈಸ್ವಾಲ್ ಅವರ ಸ್ಫೋಟಕ ಓಪನಿಂಗ್ ಸಾಥ್ ನೀಡಿದರೆ, ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್ ಬಹುಬೇಗನೇ ವಿಕೆಟ್ ಕಳೆದುಕೊಂಡಿದ್ದು ಆಘಾತ ತಂದೊಡ್ಡಿದೆ. ಮೊದಲ ಟೆಸ್ಟ್ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದ ರಾಹುಲ್, ಇಂದಿನ ಪಂದ್ಯದಲ್ಲಿ ಕೇವಲ 2 ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಕ್ರಿಸ್ ವೋಕ್ಸ್ ಬೌಲಿಂಗ್ಗೆ ಕನ್ನಡಿಗ ಕ್ಲೀನ್ ಬೌಲ್ಡ್ ಆದರು.
ರಾಹುಲ್ ಬೆನ್ನಲ್ಲೇ ಕ್ರೀಸ್ಗೆ ಬಂದ ಕರುಣ್ ನಾಯರ್, ಮೊದಲಿಗೆ ಸ್ವಲ್ಪ ಪರದಾಡಿದರು, ಉತ್ತಮ ಆರಂಭ ಪಡೆದುಕೊಂಡರು. ಆದಾಗ್ಯೂ, ದುರದೃಷ್ಟವಶಾತ್, ಬ್ರೈಡನ್ ಕಾರ್ಸ್ ಬೌಲಿಂಗ್ನಲ್ಲಿ ಹ್ಯಾರಿ ಬ್ರೂಕ್ಗೆ ಕ್ಯಾಚ್ ನೀಡಿ 31 ರನ್ಗೆ ಔಟಾದರು. ಇದರೊಂದಿಗೆ ತಮಗೆ ಕೊಟ್ಟ ಅವಕಾಶವನ್ನು ಮತ್ತೇ ಕರುಣ್ ವ್ಯರ್ಥ ಮಾಡಿದ್ದಾರೆ. 8 ವರ್ಷಗಳ ಬಳಿಕ ಇಂಗ್ಲೆಂಡ್ ಸರಣಿಯ ಮೊದಲ ಟೆಸ್ಟ್ ಮೂಲಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿರುವ ಕರುಣ್, ತಂಡಕ್ಕೆ ಬ್ಯಾಟ್ನಿಂದ ಬಲ ತುಂಬದೆ ಹೋಗಿದ್ದು, ಕ್ರಿಕೆಟ್ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ.