ಕೋಮುಲ್ ಅಧ್ಯಕ್ಷರ ಚುನಾವಣೆ ಎ.ಐ.ಸಿ.ಸಿ. ಅಂಗಳಕ್ಕೆ / ಎಸ್.ಎನ್, ನಂಜೇಗೌಡ ಸುರ್ಜೇವಾಲ ಬಳಿ ಆರೋಪ ಪ್ರತ್ಯಾರೋಪಗಳು / ಜು.೫ಕ್ಕೆ ಅಧ್ಯಕ್ಷರ ಚುನಾವಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಮುಲ್ ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೇಸ್‌ನಲ್ಲಿ ಲಾಬಿ ಮುಂದುವರೆದಿದ್ದು, ಶಾಸಕ ಕೆ.ವೈ.ನಂಜೇಗೌಡ ೩ನೇ ಬಾರಿಗೆ ಅಧ್ಯಕ್ಷನಾಗಲು ಹೈಕಮ್ಯಾಂಡ್ ಮೇಲೆ ಒತ್ತಡ ಹಾಕಿ ಮಂಗಳವಾರ ಎ.ಐ.ಸಿ.ಸಿ. ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ರವರನ್ನು ಭೇಟಿಯಾಗಿ ೭ ವರ್ಷಗಳಿಂದ ಕೋಮುಲ್‌ನಲ್ಲಿ ಅಧ್ಯಕ್ಷನಾಗಿ ಉತ್ತಮ ಆಡಳಿತ ನಡೆಸಿದ್ದೇನೆ. ೩೦೦ ಕೋಟಿ ರೂ.ಗಳಲ್ಲಿ ನೂತನ ಡೈರಿ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಯೋಜನೆಗಳನ್ನು ರೂಪಿಸಿದ್ದೇನೆ. ಅವುಗಳನ್ನು ಮುಂದುವರೆಸಲು ಮತ್ತೊಂದು ಬಾರಿ ಅವಕಾಸ ನೀಡಬೇಕೆಂದು ಸುರ್ಜೇವಾಲ ರವರಲ್ಲಿ ಮನವಿ ಮಾಡಿದ್ದಾರೆ.

ಜು.೫ ರಂದು ಕೋಮುಲ್ ಅಧ್ಯಕ್ಷರ ಚುನಾವಣೆ ನಿಗಧಿಯಾಗಿದ್ದು, ಕಾಂಗ್ರೇಸ್‌ನಿAದ ೯ ನಿರ್ದೇಶಕರು ಆಯ್ಕೆ ಆಗಿದ್ದು, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಕೆ.ವೈ.ನಂಜೇಗೌಡ ಹಾಗೂ ಮಹಾಲಕ್ಷಿö್ಮÃ ಪ್ರಸಾದ್‌ಬಾಬು ಅಧ್ಯಕ್ಷರ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದು, ಹೈಕಮ್ಯಾಂಡ್ ಹಂತದಲ್ಲಿ ತಮ್ಮದೇ ಆದ ಪ್ರಭಾವಗಳನ್ನು ಬೀರಿ, ಒತ್ತಡಗಳನ್ನು ತರುತ್ತಿದ್ದಾರೆ.

ಕೆ.ವೈ.ನಂಜೇಗೌಡ ಘಟಬಂಧನ್ ಗುಂಪಿನ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್ ಇವರುಗಳು ಕೆ.ವೈ.ನಂಜೇಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಹೈಕಮ್ಯಾಂಡ್‌ಗೆ ಒತ್ತಡ ತರುತ್ತಿದ್ದಾರೆ. ಕಾಂಗ್ರೇಸ್ ಬೆಂಬಲದಿAದ ಗೆಲುವು ಸಾಧಿಸಿರುವ ೯ ಜನ ನಿರ್ದೇಶಕರಲ್ಲಿ ೭ ಜನ ನಿರ್ದೇಶಕರನ್ನು ಘಟಬಂಧನ್ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ.

ಘಟಬಂಧನ್ ವಿರುದ್ಧ ಗುಂಪಿನಿAದ ಆಯ್ಕೆ ಆಗಿರುವ ಎಸ್.ಎನ್.ನಾರಾಯಣಸ್ವಾಮಿ ಮತ್ತು ಮಹಾಲಕ್ಷಿö್ಮÃ ಪ್ರಸಾದ್‌ಬಾಬು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪನವರ ಬೆಂಬಲಿಗರಿಗರಾಗಿದ್ದಾರೆ. ಈ ಇಬ್ಬರೂ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಕೋಮುಲ್ ಅಧ್ಯಕ್ಷರ ಸ್ಥಾನ ನೀಡಬೇಕೆಂದು ಒತ್ತಡ ತಂದಿದ್ದಾರೆ.

ಸುರ್ಜೇವಾಲ ಬಳಿ ಎಸ್.ಎನ್. ವಿರುದ್ಧ ನಂಜೇಗೌಡ ದೂರು :

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೋಮವಾರ ಸುರ್ಜೇವಾಲ ಬಳಿ ನಂಜೇಗೌಡರ ವಿರುದ್ಧ ದೂರು ನೀಡಿದ್ದು, ಇದರ ಪ್ರತಿಯಾಗಿ ಮಂಗಳವಾರ ಸುರ್ಜೇವಾಲರವರನ್ನು ಭೇಟಿಯಾದ ನಂಜೇಗೌಡ ಎಸ್.ಎನ್.ನಾರಾಯಣಸ್ವಾಮಿ ವಿನಾಕಾರಣ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅಲ್ಲದೆ ಹಿರಿಯ ಕಾಂಗ್ರೇಸ್ ಮುಖಂಡರ ವಿರುದ್ಧವು ಮಾತನಾಡುತ್ತಿದ್ದಾರೆ. ನಾನು ೭ ವರ್ಷಗಳಿಂದ ಕೋಚಿಮುಲ್‌ನಲ್ಲಿ ಉತ್ತಮ ಆಡಳಿತ ನಡೆಸಿದ್ದೇನೆ. ೩೦೦ ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಹಾಲಿನ ಡೈರಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳು ಮುಂದುವರೆದಿವೆ. ನನ್ನ ಶ್ರಮವನ್ನು ಗುರ್ತಿಸಿ ಈ ಬಾರಿಯೂ ನನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದರೆ ನನದು ಆಟ್ರಿಕ್ ಗೆಲುವಾಗಿದೆ. ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಸಂಕರ್ಪದಲ್ಲಿದ್ದೇನೆ. ಇದನ್ನು ಸಹಿಸದೆ ಎಸ್.ಎನ್. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿರುದ್ಧವೂ ಮಾತನಾಡುತ್ತಿದ್ದಾರೆ ಎಂದು ಸುರ್ಜೇವಾಲ ರವರಿಗೆ ನಂಜೇಗೌಡ ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಬೇಕಾಗಿದ್ದ ಕೋಮುಲ್ ಚುನಾವಣೆಯಲ್ಲಿ ಕೆ.ಜಿ.ಎಫ್. ಮತ್ತು ಕೋಲಾರ ದಕ್ಷಿಣ ಕ್ಷೇತ್ರ ಹಾಗೂ ಉತ್ತರ ಕ್ಷೇತ್ರದಲ್ಲಿಯೂ ಅಧಿಕೃತ ಕಾಂಗ್ರೇಸ್ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿರುದ್ಧವಾಗಿ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಯಲ್ಲಿ ತೊಂದರೆಯನ್ನು ನೀಡಿದ್ದಾರೆ. ನಮ್ಮ ವಿರೋಧಿ ಜೆಡಿಎಸ್ ಮತ್ತು ಬಿಜೆಪಿಯವರು ಮಾತನಾಡುತ್ತಿಲ್ಲ. ಕಾಂಗ್ರೇಸ್‌ನವರೇ ಆದ ಎಸ್.ಎನ್.ನಾರಾಯಣಸ್ವಾಮಿ ಇತ್ತೀಚೆಗೆ ಪಕ್ಷದ ಮುಖಂಡರ ಹಾಗೂ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುವ ಕೆಲಸ ಮಾಡುತ್ತಿದ್ಧಾರೆ ಎಂದು ದೂರಿದ್ದಾರೆ.

ಕೆ.ಹೆಚ್.ಮುನಿಯಪ್ಪ ವಿರುದ್ಧವೂ ದೂರು :

ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಗೊಂದಲಗಳಿಗೆ ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪಕ್ಷದ ವಿರುದ್ಧ ಮಾತನಾಡುತ್ತಿರುವ ಬಗ್ಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರ ಮಾಡಲಾಯಿತು. ಆದರೂ ಸಹ ನಾವು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಾಗಿದೆ. ಕೋಲಾರ ಜಿಲ್ಲೆಯ ಕಾಂಗ್ರೇಸ್ ಪಕ್ಷದ ವರ್ಚಿಸ್ಸಿಗೆ ಮಸಿ ಬಳಿಯುವ ಕೆಲಸ ಎಸ್.ಎನ್.ನಾರಾಯಣಸ್ವಾಮಿ ಮತ್ತು ಇತರರು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಬಾಯಿ ಬಿಚ್ಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಂಜೇಗೌಡ ದಾಖಲೆಗಳ ಸಮೇತ ಸುರ್ಜೇವಾಲರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಇಬ್ಬರ ಶಾಸಕ ನಡುವೆ ಮಹಾಲಕ್ಷಿö್ಮÃ ಲಾಬಿ :

ಶಾಸಕ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ ಮಧ್ಯೆ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿರುವ ಮಹಾಲಕ್ಷಿö್ಮ ಪ್ರಸಾದ್‌ಬಾಬು ೩ನೇ ಅಭ್ಯರ್ಥಿಯಾಗಿ ಹೈಕಮ್ಯಾಂಡ್ ಬಳಿ ಲಾಬಿ ನಡೆಸುತ್ತಿದ್ದು, ಮಂಗಳವಾರ ಸಿದ್ಧರಾಮಯ್ಯನವರನ್ನು ಭೇಟಿಯಾಗಿದ್ದರು. ಕೆ.ಹೆಚ್.ಮುನಿಯಪ್ಪ ಬಣದ ಮುಖಂಡರು ಸಾಥ್ ನೀಡಿದ್ದಾರೆ. ಇದಕ್ಕೂ ಮುನ್ನ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಶಾಸಕಿ ರೂಪಕಲಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ಬಾಬು ರವರನ್ನು ಭೇಟಿ ಮಾಡಿ ಮಹಿಳೆಯರಿಗೆ ಇದುವರೆವಿಗೂ ಅವಕಾಶ ನೀಡಿಲ್ಲ. ಈ ಬಾರಿ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಯಾರಿಗೆ ನಿರ್ದೇಶಕರ ಬೆಂಬಲವಿದೆಯೋ ಅವರೇ ಅಧ್ಯಕ್ಷರು :

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ್ದಾರೆ. ನಿರ್ದೇಶಕರಾಗಿ ಆಯ್ಕೆ ಆಗಿರುವ ೯ ಜನರಲ್ಲಿ ಯಾರಿಗೆ ಹೆಚ್ಚು ಬೆಂಬಲ ನೀಡುತ್ತಾರೆಯೋ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು. ಆಯ್ಕೆ ಆಗಿರುವ ೯ ನಿರ್ದೇಶಕರು ಕಾಂಗ್ರೇಸ್‌ನವರೇ. ನಿರ್ದೇಶಕರ ಅಭಿಪ್ರಾಯದಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚುನಾವಣೆಗೆ ೨ ದಿನ ಬಾಕಿ :

ಕೋಮುಲ್ ಅಧ್ಯಕ್ಷರ ಚುನಾವಣೆಗೆ ಕೇವಲ ೨ ದಿನಗಳು ಮಾತ್ರ ಬಾಕಿ ಉಳಿದಿದ್ದು, ಜು.೫ ರ ಶನಿವಾರ ಚುನಾವಣೆ ನಡೆಯಲಿದೆ. ೧೩ ನಿರ್ದೇಶಕರು, ಒಬ್ಬ ನಾಮ ನಿರ್ದೇಶಕ ಮತ್ತು ಸರ್ಕಾರದಿಂದ ೩ ನಾಮಿನಿ ಸೇರಿ ೧೭ ಜನ ಮತ ಚಲಾವಣೆಗೆ ಅವಕಾಶವಿದೆ.

ಚಿತ್ರ ೦೨ ಕೆ.ಎಲ್.ಆರ್. ೦೧ : ಕೋಮುಲ್ ಕಛೇರಿ ಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net