

IND vs ENG: ಇಂದು (ಆ.01) ಐದನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 224 ರನ್ಗಳಿಗೆ ಆಲ್ಔಟ್ ಆದ ಟೀಮ್ ಇಂಡಿಯಾ, ಬೆನ್ ಸ್ಟೋಕ್ಸ್ ಪಡೆಯನ್ನು ಸೋಲಿನ ಕೂಪಕ್ಕೆ ತಳ್ಳಲು ಪಣತೊಟ್ಟಿದೆ. ಪ್ರಸ್ತುತ, ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್, 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಜೋ ರೂಟ್ ನಡುವೆ ಸಣ ಮಾತಿನ ಚಕಮಕಿ ನಡೆದಿದ್ದು, ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್, ಕೃಷ್ಣ ವಿರುದ್ಧ ಕೋಪಗೊಂಡಿರುವುದು ದೃಶ್ಯದಲ್ಲಿ ಕಂಡುಬಂದಿದೆ. ವೇಗಿ ವರ್ತನೆಗೆ ಸಿಟ್ಟಾದ ರೂಟ್, ಈ ಬಗ್ಗೆ ಫೀಲ್ಡ್ ಅಂಪೈರ್‌ಗೆ ದೂರು ನೀಡಿದರು. ಆಂಗ್ಲ ಬ್ಯಾಟರ್ನ ಮಾತಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಪ್ರಸಿದ್ಧ್ ಬೆಂಬಲಕ್ಕೆ ನಿಂತು ಅಂಪೈರ್ ಜೊತೆ ವಾದಿಸಿದರು.
ಆರಂಭಿಕರಲ್ಲಿ, ಜ್ಯಾಕ್ ಕ್ರಾಲಿ ಆಕರ್ಷಕ ಅರ್ಧಶತಕ (57 ಎಸೆತಗಳಲ್ಲಿ 64) ಸಿಡಿಸಿದರೆ, ಬೆನ್ ಡಕೆಟ್ (38 ಎಸೆತಗಳಲ್ಲಿ 43 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡಕೆಟ್ರನ್ನು ಆಕಾಶ್ ದೀಪ್ ಪೆವಿಲಿಯನ್‌ಗೆ ಕಳುಹಿಸಿದರೆ, ಕ್ರಾಲಿಯನ್ನು ಪ್ರಸಿದ್ಧ್ ಕೃಷ್ಣ ಔಟ್ ಮಾಡಿದರು. ಇನ್ನು ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಸ್ಟಾರ್ ಬ್ಯಾಟರ್ ಓಲಿ ಪೋಪ್ (22) ವಿಕೆಟ್ ಕಳೆದುಕೊಂಡರು. ಪ್ರಸ್ತುತ, 200 ರನ್ ಗಡಿದಾಟಿರುವ ಇಂಗ್ಲೆಂಡ್ ಪಡೆ ಐದು ವಿಕೆಟ್ ಕಳೆದುಕೊಂಡಿದೆ,(ಏಜೆನ್ಸೀಸ್).