

ರಾಜ್ಕೋಟ್: ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನ 3ನೇ ದಿನದಂದು ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 122 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸುವ ಮೂಲಕ ಇಂಗ್ಲೆಂಡ್ ಮೇಲೆ ಅದ್ಭುತ ದಾಳಿ ನಡೆಸಿದ್ದಾರೆ.
ಇಂಗ್ಲೆಂಡ್ ತನ್ನ ಕಡೆಯ 8 ವಿಕೆಟ್ಗಳನ್ನು ಕೇವಲ 95 ರನ್ಗಳಿಗೆ ಕಳೆದುಕೊಂಡ ನಂತರ ಭಾರತದ ಮುನ್ನಡೆ ಬೆಳೆವಣಿಗೆ ಕಂಡಿತು. ಇದರೊಟ್ಟಿಗೆ ಬ್ಯಾಟಿಂಗ್ ಪ್ರದರ್ಶನದಲ್ಲಿ ಉತ್ತಮ ಆರಂಭವನ್ನು ಕೊಟ್ಟ ಜೈಸ್ವಾಲ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಬೇಗನೇ ಔಟ್ ಆಗುವ ಮೂಲಕ ಸಾಥ್ ಕೊಡಲು ವಿಫಲರಾದರು. 122 ಎಸೆತಗಳಲ್ಲಿ ಬಂದ ಶತಕ ಈ ಸರಣಿಯ 2ನೇ ಸೆಂಚುರಿಯಾಗಿದೆ.
ಪ್ರಾರಂಭದಲ್ಲಿ ಉತ್ತಮ ಸ್ಟಾರ್ಟ್ ಕೊಟ್ಟ ರೋಹಿತ್ ಶರ್ಮಾ ಹೆಚ್ಚು ಸಮಯ ಕ್ರೀಸ್ನಲ್ಲಿ ನಿಲ್ಲದೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ, 122 ಎಸೆತಗಳಲ್ಲಿ ಮಾರ್ಕ್ ವುಡ್ ಅವರ ಬೌಲಿಂಗ್ನಲ್ಲಿ ಕವರ್ಗಳ ಮೂಲಕ ಬೌಂಡರಿಯೊಂದಿಗೆ ಶತಕ ಬಾರಿಸಿದ ಯಶಸ್ವಿ, ಸಂತಸದ ಅಲೆಯಲ್ಲಿ ತೇಲಿದರು. ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್ನ ಮೊದಲನೇ ಇನ್ನಿಂಗ್ಸ್ನಲ್ಲಿ ಆಂಗ್ಲರ ವಿರುದ್ಧ ದ್ವಿಶತಕ ಸಿಡಿಸಿದ್ದು, ಅಂತಿಮವಾಗಿ 396 ರನ್ಗಳ ಗೆಲುವಿನ ಮೊತ್ತಕ್ಕೆ ಕಾರಣವಾಯಿತು,(ಏಜೆನ್ಸೀಸ್).