ಹಬ್ಬದ ಋತುವಿನಲ್ಲಿ ಭರ್ಜರಿ ವಾಹನ ಮಾರಾಟ; ಅಕ್ಟೋಬರ್​ನಲ್ಲಿ 48% ಏರಿಕೆ

Car
Published on

ನವದೆಹಲಿ: ಹಬ್ಬದ ಋತುವಾದ ಅಕ್ಟೋಬರ್‌ನಲ್ಲಿ ವಾಹನಗಳ ಮಾರಾಟ ಭರ್ಜರಿಯಾಗಿ ನಡೆದಿದ್ದು ಕಳೆದ ವರ್ಷದ ಇದೇ ಅವಧಿಗಿಂತ ಶೇಕಡ 48ರಷ್ಟು ಏರಿಕೆ ದಾಖಲಿಸಿದೆ. ಕಳೆದ ಅಕ್ಟೋಬರ್‌ನಲ್ಲಿ 14,18,726 ವಾಹನಗಳ ಮಾರಾಟವಾಗಿದ್ದು, ಈ ಬಾರಿ 20,94,378 ಎಲ್ಲ ವಿಭಾಗಗಳ ವಾಹನಗಳ ಖರೀದಿ ನಡೆದಿದೆ ಎಂದು ಆಟೋಮೊಬೈಲ್‌ ವರ್ತಕರ ಸಂಘಗಳ ಒಕ್ಕೂಟ (ಎಫ್​ಎಡಿಎ) ಅಧ್ಯಕ್ಷ ಮಾನಿಶ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ.

ಈ ವರ್ಷ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇಕಡ 51 ಶೇಕಡ 66 ಏರಿಕೆಯಾಗಿದೆ. ಪ್ರಯಾಣಿಕ ವಾಹನಗಳು ಶೇಕಡ 41ರಷ್ಟು ಅಧಿಕ ಮಾರಾಟವಾಗಿವೆ. ಟ್ರ್ಯಾಕ್ಟರ್ ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಅನುಕ್ರಮವಾಗಿ ಶೇಕಡ 17 ಹಾಗೂ ಶೇಕಡ 25 ಏರಿಕೆ ದಾಖಲಾಗಿದೆ ಎಂದು ಸಿಂಘಾನಿಯಾ ವಿವರಿಸಿದ್ದಾರೆ.

ಹಬ್ಬದ ಋತುವಿನಲ್ಲಿ ವಾಹನೋದ್ಯಮಕ್ಕೆ ಸಂಭ್ರಮ ಕಳೆಗಟ್ಟಿತ್ತು. ಇದೇ ಮೊದಲ ಬಾರಿಗೆ ಪ್ರತಿಯೊಂದು ವಿಭಾಗದ ಗ್ರಾಹಕರು ವಾಹನ ಖರೀದಿಗೆ ಮುಂದಾಗಿದ್ದರು. ಹಬ್ಬದ ಖರೀದಿಗೆ ಜನರು ಉತ್ಸಾಹದಿಂದ ಮುಂದಾಗಿದ್ದುದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯುತ್ತಮ ಮಾರಾಟವಾಗಿದೆ ಎಂದು ಸಿಂಘಾನಿಯಾ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net