ನೀರ್ಚಾಲು ಕನ್ನೆಪ್ಪಾಡಿ ಮಧ್ಯೆ ಅಪಘಾತ ಹೆಚ್ಚಳ

New Project (29)
Published on

ಬದಿಯಡ್ಕ: ಕುಂಬಳೆ ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ವಿವಿಧೆಡೆಗಳಲ್ಲಿ ನಿರಂತರ ಅಪಘಾತ ನಡೆಯುತ್ತಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ವಾಹನಗಳು ಅತಿ ವೇಗವಾಗಿ ಸಂಚರಿಸುವುದೇ ಅಪಘಾತಗಳಿಗೆ ಕಾರಣವೆಂದು ಸಾರ್ವಜನಿಕರು ದೂರಿದ್ದಾರೆ.

ಕನ್ನೆಪ್ಪಾಡಿಯಿಂದ ನೀರ್ಚಾಲು ತನಕದ ರಸ್ತೆ ಮಧ್ಯೆ ಭಾನುವಾರ ಮಧ್ಯಾಹ್ನ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಈ ರಸ್ತೆಯಲ್ಲಿ ಎಚ್ಚರಿಕಾ ಸೂಚನಾ ಫಲಕಗಳನ್ನು ಅಳವಡಿಸದಿರುವುದರಿಂದ ನಿರಂತರ ಅಪಘಾತವುಂಟಾಗುತ್ತಿದೆ ಎನ್ನಲಾಗಿದೆ.

ಜೇನುಮೂಲೆ ಎಂಬಲ್ಲಿ ಅನೇಕರು ಬಸ್ಸಿಗೆ ಕಾದು ನಿಲ್ಲುತ್ತಿದ್ದು, ಪ್ರಯಾಣಿಕರಿಗಾಗಿ ಬಸ್ಸು ನಿಲ್ಲಿಸಿದಾಗ ಹಿಂದಿನ ವಾಹನಗಳಿಗೆ ಸಮಸ್ಯೆಯುಂಟಾಗುತ್ತಿದೆ. ರಸ್ತೆ ದಾಟಲೂ ಪ್ರಯಾಣಿಕರು ಕಷ್ಟಪಡಬೇಕಾಗಿದೆ. ಇತ್ತೀಚೆಗಷ್ಟೇ ನೀರ್ಚಾಲು ಕಟ್ಟೆಯ ಸಮೀಪ ಬೈಕ್ ಸವಾರರೋರ್ವರಿಗೆ ಕಾರು ಡಿಕ್ಕಿ ಹೊಡೆದು ಅಪಘಾತವುಂಟಾಗಿದೆ.

ಕನ್ನೆಪ್ಪಾಡಿ ನೀರ್ಚಾಲಿನ ಮಧ್ಯ ಭಾಗ ಎರಡೂ ಬದಿಗಳಲ್ಲಿ ಅನೇಕ ಮನೆಗಳಿರುವುದರಿಂದ ಅಲ್ಲಲ್ಲಿ ಮನೆಗಳಿಗೆ ತೆರಳುವ ರಸ್ತೆಗಳಿವೆ. ವಾಹನಗಳನ್ನು ತಿರುಗಿಸುವ ಸಂದರ್ಭ ಹಿಂದಿನಿಂದ ವೇಗವಾಗಿ ವಾಹನಗಳು ಬರುವುದು ಚಾಲಕರ ಗಮನಕ್ಕೆ ಬಾರದೇ ಅಪಘಾತವುಂಟಾಗುತ್ತಿದೆ. ಸಂಬಂಧಪಟ್ಟವರಿಗೆ ಸಮಸ್ಯೆ ಕುರಿತು ಮನವಿ ನೀಡಲಾಗಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಣಿಸದಿರುವ ಬಗ್ಗೆ ಸ್ಥಳೀಯರಿಂದ ಸಮಾಧಾನದ ಮಾತುಗಳು ಕೇಳಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net