ದೇಶದಲ್ಲಿ ಆದಾಯ ಅಸಮಾನತೆ ಕುಸಿತ; ಎಸ್​ಬಿಐನ ಸಂಶೋಧನಾ ಅಧ್ಯಯನ ಬಹಿರಂಗ

money
Published on

ನವದೆಹಲಿ: ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆದಾಯದ ಅಸಮಾನತೆಯು ತಗ್ಗಿದೆ ಎಂದು ಎಸ್​ಬಿಐನ ಸಂಶೋಧನಾ ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಹೆಚ್ಚಿದ ಆದಾಯ ಮತ್ತು ಭಾರತೀಯ ಮಧ್ಯಮ ವರ್ಗದಲ್ಲಿ ಅಭಿವೃದ್ಧಿ ಕಂಡುಬರುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದೆ.

ವರ್ಷದಿಂದ ವರ್ಷಕ್ಕೆ ಆದಾಯ ತೆರಿಗೆ ವ್ಯಾಪ್ತಿ ವಿಸ್ತರಣೆಗೊಂಡಿದೆ. 2021&22ರಲ್ಲಿ 7 ಕೋಟಿ ಇದ್ದ ಆದಾಯ ತೆರಿಗೆ ರಿರ್ಟನ್​ ಸಲ್ಲಿಕೆ ಪ್ರಮಾಣ 2022-23ರಲ್ಲಿ 7.4 ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್​ 31 ರವರೆಗೆ ಒಟ್ಟು 8. 2 ಕೋಟಿ ಆದಾಯ ತೆರಿಗೆ ರಿಟನ್ಸ್​ ಸಲ್ಲಿಸಲಾಗಿದೆ.

5 ಲಕ್ಷದಿಂದ 10 ಲಕ್ಷ ರೂಪಾಯಿಗಳ ನಡುವೆ ಗಳಿಸುವ ವೈಯಕ್ತಿಕ ತೆರಿಗೆದಾರರ ರಿಟರ್ನ್ಸ್​ ಸಲ್ಲಿಕೆಯಲ್ಲಿ ಶೇ. 295 ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ. 10 ಲಕ್ಷದಿಂದ 25 ಲಕ್ಷ ರೂಪಾಯಿಗಳ ನಡುವೆ ಆದಾಯ ಹೊಂದಿರುವ ಜನರು ಸಲ್ಲಿಸಿದ ಐಟಿಆರ್​ಗಳ ಸಂಖ್ಯೆ ಸುಮಾರು 3 ಪಟ್ಟು ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net