ಹೆಬ್ರಿ: ಹೆಬ್ರಿ ಸತೀಶ್ ಪೈ ಕುಟುಂಬದವರು ನಿರ್ಮಿಸಿಕೊಟ್ಟ ಪ್ರಯೋಗಾಲಯ ಯಾವುದೇ ಖಾಸಗಿ ಕಾಲೇಜುಗಳ ಪ್ರಯೋಗಾಲಯಗಳಿಗಿಂತ ಕಡಿಮೆ ಇಲ್ಲ. ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸೇರಿಕೊಳ್ಳುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಉದ್ಯಮಿ ಸತೀಶ್ ಪೈ ಮತ್ತು ಕುಟುಂಬದವರು ಅವರ ತಂದೆ ಎಚ್.ಅನಂದ್ರಾ ಪೈ ಸ್ಮಾರಕ ಕಂಪ್ಯೂಟರ್ ಸೈನ್ಸ್ ಪ್ರಯೋಗಾಲಯ ಹಾಗೂ ಉನ್ನತೀಕರಿಸಿದ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.
ದಾನಿ ಸತೀಶ್ ಪೈ ಮಾತನಾಡಿದರು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ್ ಬಂಗೇರ, ಇಒ ಶಶಿಧರ್ ಕೆಜೆ, ಎಸ್‌ಡಿಎಂಸಿ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಯೋಗೀಶ್ ಭಟ್, ಸೀತಾನದಿ ವಿಠಲಶೆಟ್ಟಿ, ಪ್ರಾಂಶುಪಾಲ ಉಮೇಶ್, ಉಪ ಪ್ರಾಂಶುಪಾಲ ದಿವಾಕರ ಮರಕಾಲ ಉಪಸ್ಥಿತರಿದ್ದರು. ಪ್ರಾಂಶುಪಾಲ ಉಮೇಶ್ ಸ್ವಾಗತಿಸಿ, ಉಪನ್ಯಾಸಕಿ ಸುಪ್ರಿಯಾ ವಂದಿಸಿದರು. ಹಿರಿಯ ಉಪನ್ಯಾಸಕ ಅನಂತಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.
ಕುಟುಂಬದ ಆದಾಯದ ಒಂದು ಭಾಗವನ್ನು ಸಾಮಾಜಿಕ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ಇದರ ಅಂಗವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ಕಾರ್ಯಕ್ರಮದ ರೂಪುರೇಷೆ ನಡೆದಿದೆ. ಕಂಪ್ಯೂಟರ್ ಪ್ರಯೋಗಾಲಯ ಶಿಕ್ಷಕರ ಸಂಬಳ ಹಾಗೂ ನಿರ್ವಹಣೆ ಮಾಡುತ್ತೇನೆ.
-ಸತೀಶ್ ಪೈ ದಾನಿ