

ಸುಬ್ರಹ್ಮಣ್ಯ: ಎಡಮಂಗಲದ ಪರ್ಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ವಿವೇಕ ಕೊಠಡಿಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಡಮಂಗಲ ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಜಾಲ್ತಾರು ವಹಿಸಿದ್ದರು.
ಎಸ್ಡಿಎಂಸಿ ಅಧ್ಯಕ್ಷ ಪ್ರತಿಶ್ ಬಳಕ್ಕಬೆ, ಶಾಲಾ ಸಿಆರ್ಪಿ ಜಯಂತ ಕೆ., ಮುಖ್ಯಶಿಕ್ಷಕ ಗೀತಾ, ಎಸ್ಡಿಎಂಸಿ ಉಪಾಧ್ಯೆ ಭಾರತಿ ಮರೋಳಿ, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಜಗದೀಶ್ ಪರ್ಲ, ಎಸ್ಡಿಎಂಸಿ ನಿಕಟಪೂರ್ವಾಧ್ಯಕ್ಷ ಪ್ರವಿಣ್ ಪರ್ಲ, ಗ್ರಾ.ಪಂ.ಸದಸ್ಯರಾದ ನಾಗೇಶ್ ಮರೋಳಿ, ಗೀತಾ ರೈ, ವನಿತಾ ಉಪಸ್ಥಿತರಿದ್ದರು.
ಸಹಶಿಕ್ಷಕಿ ಸ್ವಾತಿ ವಂದಿಸಿದರು. ಶಿವಪ್ರಸಾದ್ ನೂಚಿಲ ನಿರೂಪಿಸಿದರು. ಶಾಲಾ ಹಳೇ ವಿದ್ಯಾರ್ಥಿಗಳು, ಊರವರು, ಪಾಲಕರು ಉಪಸ್ಥಿತರಿದ್ದರು.