ಸಿರಿಬಾಗಿಲುವಿನಲ್ಲಿ ಆರೋಗ್ಯಉಚಿತ ಶಿಬಿರ

Ksd_Medical-camp
Published on

ಕಾಸರಗೋಡು: ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಜರುಗಿತು.

ಕಾಸರಗೋಡಿನ ಹಿರಿಯ ವೈದ್ಯ ಬಿ.ಎಸ್​.ರಾವ್​ ಶಿಬಿರ ಉದ್ಘಾಟಿಸಿದರು. ವಾಸುದೇವ ಕಾರಂತ ಉಜಿರೆಕೆರೆ, ಎಲುಬು ತ ಡಾ.ಹರಿ ಕಿರಣ ಬಂಗೇರ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಜಗದೀಶ ಕೆ.ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ನೀರಾಳ ವಂದಿಸಿದರು. ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ವೈದ್ಯಕಿಯ ಶಿಬಿರದ ಸಂಟಕ ಉದಯ ಭಟ್​ ನೇತೃತ್ವ ವಹಿಸಿದ್ದರು. 150ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಪ್ರತಿಷ್ಠಾನದ ಟ್ರಸ್ಟಿ ಸುಮಿತ್ರಾ ಮಯ್ಯ, ಶ್ರೀಮುಖ ಮಯ್ಯ, ಶ್ರೀರಾಜ್​ ಮಯ್ಯ, ಶಿವ ನಾರಾಯಣ ವಾಟ್ಸಾಪ್​ ಬಳಗದ ಸದಸ್ಯರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net