ಕೆಂಜಾರು ನೂತನ ರಸ್ತೆ ಉದ್ಘಾಟನೆ

New Project (13)
Published on

ಗುರುಪುರ: ಬಜ್ಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಎದುರಿನ ರಾಜ್ಯ ಹೆದ್ದಾರಿಯಿಂದ ಪರಾರಿಬೆಟ್ಟುವಿನಿಂದ ಉಜ್ಜಿಮಾರು ಶ್ರೀಕ್ಷೇತ್ರದವರೆಗೆ ಸಂಪರ್ಕ ರಸ್ತೆಯನ್ನು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಉದ್ಘಾಟಿಸಿದರು.

ಸಮಾರಂಭದಲ್ಲಿ ಮೂಲ್ಕಿ-ಮೂಡುಬಿದಿರೆ ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್ ಪೊರ್ಕೋಡಿ, ಬಜ್ಪೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಜಯ್ ಕುಮಾರ್ ಕೆಂಜಾರು, ಕಾರ್ಯದರ್ಶಿ ದಿನೇಶ್ ಶೆಟ್ಟಿ, ಪ್ರಮುಖರಾದ ಜಯಂತ ಸಾಲ್ಯಾನ್ ತೋಕೂರು, ಗಣೇಶ್ ಅರ್ಬಿ, ಭೋಜರಾಜ ಕೋಟ್ಯಾನ್, ಲಕ್ಷ್ಮಣ್ ಬಂಗೇರ, ಪದ್ಮನಾಭ ನಾಯಕ್, ದಯಾಕರ ಶೆಟ್ಟಿ, ವಿನಯ ಸಾಲ್ಯಾನ್, ರಾಕೇಶ್ ಪೂಜಾರಿ ಕೆಂಜಾರು, ನಿತಿನ್ ಪಕ್ಕಳ, ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net