ಸೃಜನಶೀಲತೆಯಿಂದ ಉದ್ಯೋಗದಲ್ಲಿ ಯಶಸ್ಸು : ಸದಾನಂದ ನಾವಡ ಅಭಿಪ್ರಾಯ

04
Published on

ಮೂಡುಬಿದಿರೆ: ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ತನ್ನ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಉದ್ಯೋಗದಲ್ಲಿ ಯಶಸ್ಸು ಸಾಧಿಸಬೇಕಾದರೆ ಸೃಜನಶೀಲತೆ ಬೇಕು. ಕಾಲದೊಂದಿಗೆ ಬದಲಾಗಲು ಬಯಸದ ಅನೇಕ ಉದ್ದಿಮೆಗಳು ಇಂದು ವಿಫಲವಾಗಿವೆ. ತನ್ನ ಯಶಸ್ಸು ಅಥವಾ ಸೋಲಿಗೆ ತನ್ನ ಮನೋಭಾವವೇ ಕಾರಣ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಸದಾನಂದ ನಾವಡ ಹೇಳಿದರು.

ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಶೇಖ್ ಸಾಹಿಲ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

ಸುವಿತ್ ಭಂಡಾರಿ ಸ್ವಾಗತಿಸಿದರು. ವಾಣಿಜ್ಯ ಸಂಘದ ಅಧ್ಯಕ್ಷೆ ಶ್ರಾವಣಿ ಪ್ರಾಸ್ತಾವನೆಗೈದರು. ಅತಿಥಿಯನ್ನು ನಿಶ್ಚಯ ಹಾಗೂ ಸುಹಾನ ಸಚಿನ್ ಪರಿಚಯಿಸಿದರು. ಶಮಂತ್ ಕೆ.ಎಂ. ವಂದಿಸಿದರು.

ಸಂಸ್ಥೆಯಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಪಡಿಸುವಲ್ಲಿ ಸಹಕಾರಿ. ಪಠ್ಯೇತರ ಚಟುವಟಿಕೆಗಳ ಹೊರತಾಗಿಯೂ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳು ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಯುವರಾಜ ಜೈನ್, ಸಂಸ್ಥೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net