

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ವರ್ಷಕ್ಕೆ 5 ಕೋಟಿ ರೂ. ಅನುದಾನ ನನಗೆ ಇದೆ. ಮಂಡಲ ಸಮಿತಿ ಸೂಚಿದಂತೆ ಅನುದಾನ ಹಂಚುತ್ತೇವೆ. ಉಳಿದಂತೆ ಬೇರೆ ಬೇರೆ ಅನುದಾನ ತರಿಸುತ್ತೇವೆ. ಆನೆ ದಾಳಿ ಸಮಸ್ಯೆಗೆ ಬಗೆಹರಿಸಲು ಆನೆ ಪಾರ್ಕ್ ಮಾಡಲು ಬೇಡಿಕೆ ಇರಿಸಿದ್ದೇವೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ನಡುಗಲ್ಲುವಿನಲ್ಲಿ ಮಂಗಳವಾರ ಬಿಜೆಪಿ ಸುಳ್ಯ ಮಂಡಲ, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಮತ್ತು ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಮಹಾ ಶಕ್ತಿ ಕೇಂದ್ರದ ಕೃಷ್ಣಯ್ಯ ಮೂಲೆತೋಟ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ವಿ.ತೀರ್ಥರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಸುಳ್ಯ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ವಿನಯ್ ಕುಮಾರ್ ಕಂದಡ್ಜ, ಪ್ರದೀಪ್ ಕುಮಾರ್ ಮನವಳಿಕೆ, ಆರ್.ಕೆ.ಭಟ್, ಚಂದ್ರಶೇಖರ ಪನ್ನೆ, ಗಿರೀಶ್ ಆಚಾರ್ಯ, ಚಂದ್ರಶೇಖರ ಬಾಳುಗೋಡು ಮೊದಲಾದವರಿದ್ದರು. ನವೀನ್ ಬಾಳುಗೋಡು ಸ್ವಾಗತಿಸಿದರು. ಲೀಲಾವತಿ ಅಂಜೇರಿ ಪ್ರಾರ್ಥಿಸಿದರು. ವಿಜಯಕುಮಾರ್ ಚಾರ್ಮತ ವಂದಿಸಿದರು.
ಸಂಪಾಜೆ ವಾಣಿ ರಸ್ತೆ ಡಿ.ಪಿ.ಆರ್. ಮಾಡಲಾಗುತ್ತಿದೆ. ರೈಲ್ವೆಗೆ ಸಂಬಂಧಿಸಿ ಹಲವು ಕಡೆ ಕ್ರಾಸಿಂಗ್ ಸಮಸ್ಯೆ ನಿವಾರಿಸಲು ರೈಲ್ವೆ ಅಧಿಕಾರಿಗಳನ್ನು ಇಲ್ಲೇ ಕರೆಯುತ್ತೇವೆ. ಅಡಿಕೆ ಹಳದಿ ರೋಗ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿ ಬಾಧಿತ ಪ್ರದೇಶ, ಆಗಿರುವ ನಷ್ಟದ ವರದಿ ತಯಾರಿಸಲು ಹೇಳಲಾಗಿದೆ. ಬಳಿಕ ಪ್ಯಾಕೇಜ್ ನೀಡುವ ಬಗ್ಗೆ ತಿಳಿಸಲಾಗುವುದು. ಕ್ಯಾ.ಬ್ರಿಜೇಶ್ ಚೌಟ, ಸಂಸದ https://www.vijayavani.net/assistance-in-the-treatment-of-the-sick https://www.vijayavani.net/shiradi-shirvattadka-road-problem