ಭಜನೆಯಿಂದ ಸಂಸ್ಕೃತಿ, ಸಂಸ್ಕಾರ ಬೆಳವಣಿಗೆ : ಡಾ.ದೇವಿ ಪ್ರಸಾದ್ ಶೆಟ್ಟಿ ಅಭಿಪ್ರಾಯ

New Project (28)
Published on

ಕಿನ್ನಿಗೋಳಿ: ಭಜನೆ ಮೂಲಕ ಸಂಸ್ಕೃತಿ, ಸಂಸ್ಕಾರಗಳು ಬೆಳೆಯುತ್ತವೆ. ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸ ಆಗಬೇಕು ಎಂದು ಬೆಂಗಳೂರು ಸತ್ಯವಾಣಿ ವಿದ್ಯಾಪೀಠದ ಡಾ.ದೇವಿ ಪ್ರಸಾದ್ ಶೆಟ್ಟಿ ಹೇಳಿದರು.

ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಬೋಳ ರಘುರಾಮ ಶೆಟ್ಟಿ ಮುಂಬಯಿ ಅವರ ಕೊಡುಗೆಯಾದ ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಸಭಾಗೃಹದ ಉದ್ಘಾಟನಾ ಸಮಾರಂಭದಲ್ಲಿ ಇತ್ತೀಚೆಗೆ ಮಾತನಾಡಿದರು.

ಮಂದಿರದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ಪಂಜ ಅಧ್ಯಕ್ಷತೆ ವಹಿಸಿದ್ದರು. ರಘುರಾಮ ಶೆಟ್ಟಿ ಬೋಳ ಹಾಗೂ ಭವಾನಿ ರಘುರಾಮ ಶೆಟ್ಟಿ ಬೋಳ ಸಭಾಗೃಹವನ್ನು ಉದ್ಘಾಟಿಸಿ ಶುಭ ಹಾರೈಸಿದರು. ರಘುರಾಮ ಶೆಟ್ಟಿ ಬೋಳ, ಭವಾನಿ ಶೆಟ್ಟಿ, ಪಂಜದ ಗುತ್ತು ವಿಶ್ವನಾಥ ಶೆಟ್ಟಿ ಮತ್ತು ಸ್ಥಳೀಯ 10 ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪಂಜ-ಕೊಯಿಕುಡೆ ಮಹಾಗಣಪತಿ ಮಂದಿರದ ಸುರೇಶ್ ಭಟ್ ಪಂಜ, ಪ್ರವೀಣ್ ಆಳ್ವ ಪಂಜದಗುತ್ತು, ಸುರತ್ಕಲ್ ಪಟ್ಲ ಫೌಂಡೇಶನ್ ಅಧ್ಯಕ್ಷ ಸುಧಾಕರ ಎಸ್.ಪೂಂಜ, ಜನನಿ ಹೊಸಬೆಟ್ಟು, ಉದ್ಯಮಿ ರಮೇಶ್ ಡಿ.ಶೆಟ್ಟಿ ಪಂಜ ಬಾಕಿಮಾರುಗುತ್ತು, ಸಿವಿಲ್ ಇಂಜಿನಿಯರ್ ಕುತ್ಯಾರು ಪ್ರಸಾದ್ ಶೆಟ್ಟಿ, ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ಗುತ್ತಿಗೆದಾರ ಸುರೇಶ್ ಪಂಜ ಮತ್ತಿತರರು ಉಪಸ್ಥಿತರಿದ್ದರು. ಬೈಲಗುತ್ತು ಸತೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಮೋದ್ ಶೆಟ್ಟಿ ಪಂಜ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net