ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಸಲ್ಲದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ

BRamanathRaiVb_vb_17
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಹತ್ಯೆ ಯತ್ನ ಮತ್ತು ಅಮಾಯಕನ ಹತ್ಯೆ ಬಳಿಕ ಸರ್ಕಾರ ಕೆಲವು ಬದಲಾವಣೆ ಮಾಡಿದೆ. ಪೊಲೀಸರ ನಿರ್ದಾಕ್ಷಿಣ್ಯ ಕ್ರಮಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. ಯಾರು ಕ್ರಿಮಿನಲ್‌ಗಳು ಮತ್ತು ಯಾರು ಒಳ್ಳೆಯವರು ಎಂದು ಜನರಿಗೆ ಗೊತ್ತಿದೆ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಬಾರದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ವೈಷಮ್ಯ ನಿಯಮತ್ರಿಸದಿದ್ದರೆ ಜನಾಂಗೀಯ ಘರ್ಷಣೆಗೆ ಕಾರಣವಾಗಬಹುದು. ಅದು ಮಣಿಪುರ, ಬೋಸ್ನಿಯಾದಂತಾಗಬಹುದು. ಬೋಸ್ನಿಯಾದಲ್ಲಿ ಸ್ಥಳೀಯ ಪೊಲೀಸರಿಂದ ನಿಯಂತ್ರಣ ಸಾಧ್ಯವಾಗದೆ ಬೇರೆ ದೇಶದ ಪೊಲೀಸರು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದವರು ಎಚ್ಚರಿಸಿದರು.

ಶಾಂತಿ ಸಭೆ ನಡೆಸಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಅವರಿಗೆ ಶಾಂತಿ ಬಗ್ಗೆ ನಂಬಿಕೆ ಇದೆಯಾ? ಹಿಂದೆ ಶಾಂತಿ ಸಭೆ ನಡೆದಾಗ ಬಹಿಷ್ಕಾರ ಹಾಕಿಲ್ಲವೇ? ಅವರು ಶಾಂತಿ ಸಭೆಗೆ ಬರುವುದಿಲ್ಲ. ಬಂದ ನಂತರ ಅಲ್ಲಿಯ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ. ಅದಕ್ಕೆ ಬಾರದೆ ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಗಲಾಟೆ ಬೇಕು. ಯಾರದೋ ಮಕ್ಕಳು ಜೈಲಿಗೆ ಹೋಗುತ್ತಾರೆ ಎಂದು ಆರೋಪಿಸಿದರು.

ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಏನು ಮಾಡಬೇಕು ಎಂಬುದನ್ನು ಪೊಲೀಸರೇ ನಿರ್ಧರಿಸಬೇಕು. ಆ್ಯಂಟಿ ಕಮ್ಯೂನಲ್ ೆರ್ಸ್ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಯಾವುದೇ ಘರ್ಷಣೆ ನಡೆಯಬಾರದು. ಹತ್ಯೆಗಳ ಸೂತ್ರಧಾರರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.

ನನಗೆ ಮರಳು, ಕಲ್ಲು, ಸಾರಿಗೆ, ಮದ್ಯ ಸಹಿತ ಯಾವುದೇ ವ್ಯವಹಾರ ಇಲ್ಲ. ನಾನು ಯಾರನ್ನೂ ವರ್ಗಾವಣೆ ಮಾಡಿಲ್ಲ. ಜಾತ್ಯತೀತ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಇಲ್ಲಿ ಜನರಿಗೆ ವಿಶ್ವಾಸ ಮೂಡಿಸಿ ಶಾಂತಿ ನೆಲೆಸಬೇಕು ಎಂದರು.

ಮಂಗಳೂರು- ಹಾಸನ ರಾಷ್ಟ್ರೀಯ ಅಭಿವೃದ್ಧಿ ಯೋಜನೆಯು ಆಸ್ಕರ್ ರ್ನಾಂಡಿಸ್ ಸಾರಿಗೆ ಸಚಿವರಾಗಿದ್ದಾಗ ಮಂಜೂರಾಗಿತ್ತು. ಬಹಳಷ್ಟು ನಿಧಾನವಾಗಿ ಕಾಮಗಾರಿ ನಡೆಯುತ್ತಿದೆ. ಕಲ್ಲಡ್ಕ ಸೇತುವೆ ಅದರ ಭಾಗ. ಅದನ್ನು ಜನಪ್ರತಿನಿಧಿಗಳನ್ನು ಬಿಟ್ಟು ಉದ್ಘಾಟನೆ ಮಾಡಿದ್ದಾರೆ. ಅಲ್ಲಿದ್ದ ಜನರಿಗೆ ಖುಷಿಯಾಗಿದ್ದರೆ ಸಾಕು ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮುಖಂಡರಾದ ಶಶಿಧರ್ ಹೆಗ್ಡೆ, ಆರ್.ಕೆ. ಪ್ರಥ್ವಿರಾಜ್, ವಿಶ್ವಾಸ್‌ಕುಮಾರ್ ದಾಸ್, ನವೀನ್ ಡಿಸೋಜ, ಅಪ್ಪಿ, ಪ್ರಕಾಶ್ ಸಾಲ್ಯಾನ್, ದಿನೇಶ್ ರೈ ಉಳ್ಳಾಲ್, ಲಾನ್ಸಿ ಲೋಟ್ ಪಿಂಟೊ, ಆರ್ಿ ಬಾವ, ಶುಭೋದಯ ಆಳ್ವ, ಕೇಶವ ಮರೋಳಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net