ಸಮಾಜಮುಖಿ ಚಿಂತನೆಯಿಂದ ಸಾಮಾಜಿಕ ಪ್ರಗತಿ : ಸಂಜೀವ ಗುಂಡ್ಮಿ

Rotary
ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಅಧ್ಯಕ್ಷರಾಗಿ ಜಿ.ತಿಮ್ಮ ಪೂಜಾರಿ, ಕಾರ್ಯದರ್ಶಿಯಾಗಿ ಪಿ.ಚಂದ್ರ ಪೂಜಾರಿ ಕಾರ್ಕಡ ಅಧಿಕಾರ ಸ್ವೀಕರಿಸಿದರು
Published on

ಕೋಟ: ಸಂಘಟನೆಗಳ ಹುಟ್ಟು ಮುಖ್ಯವಲ್ಲ. ಅವು ಯಾವ ರೀತಿ ಕಾರ‌್ಯನಿರ್ವಹಿಸುತ್ತದೆ ಎನ್ನುವುದು ಮುಖ್ಯ. ರೋಟರಿಯಂಥಹ ಸಮಾಜಮುಖಿ ಚಿಂತನೆಯ ಸಂಘಟನೆಗಳಿಂದ ಸಾಮಾಜಿಕ ಪ್ರಗತಿ ಸಾಧ್ಯ ಎಂದು ಉಪನ್ಯಾಸಕ ಸಂಜೀವ ಗುಂಡ್ಮಿ ತಿಳಿಸಿದರು. ಕೋಟದಲ್ಲಿ ಮಂಗಳವಾರ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಅಧ್ಯಕ್ಷರಾಗಿ ಜಿ.ತಿಮ್ಮ ಪೂಜಾರಿ, ಕಾರ್ಯದರ್ಶಿಯಾಗಿ ಪಿ.ಚಂದ್ರ ಪೂಜಾರಿ ಕಾರ್ಕಡ ಅಧಿಕಾರ ಸ್ವೀಕರಿಸಿದರು. ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ ಹಂಚಿಕೆ ನೆರವೇರಿತು.ರೋಟರಿ ಸಹಾಯಕ ಗವರ್ನರ್ ಮಮತಾ ಆರ್.ಶೆಟ್ಟಿ ಹದ್ದೂರು, ಮಾಜಿ ಸಹಾಯಕ ಗವರ್ನರ್ ನರಸಿಂಹ ಪ್ರಭು, ವಲಯ ಪ್ರತಿನಿಧಿ ಗಣೇಶ್ ಹೊಳ್ಳ, ಮಾಜಿ ಅಧ್ಯಕ್ಷ ದೇವಪ್ಪ ಪಟಗಾರ್ ಉಪಸ್ಥಿತರಿದ್ದರು. ಕ್ಲಬ್ ಸದಸ್ಯ ಶ್ರೀಕಾಂತ್ ಶೆಣೈ ಸ್ವಾಗತಿಸಿ, ರಾಜೇಶ್, ರಾಜೇಂದ್ರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net