

ಕುಂದಾಪುರ: ಭಾರತೀಯ ಅಂಚೆ ಇಲಾಖೆ ವತಿಯಿಂದ ಬಿಡುಗಡೆಯಾದ ಹೊಸ ತಂತ್ರಾಂಶ ಎಪಿಟಿ 2.0 (ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ) ಉದ್ಘಾಟನಾ ಸವಾರಂಭ ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ನಡೆಯಿತು.
ಹೊಸ ತಂತ್ರಾಂಶ ಉದ್ಘಾಟಿಸಿದ ಉಡುಪಿ ಅಂಚೆ ಅಧೀಕ್ಷಕ ರಮೇಶ್ ಪ್ರಭು ವಾತನಾಡಿ, ಹಲವಾರು ಹೊಸ ಸೇವೆಗಳೊಂದಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯೊಂದಿಗೆ ಹೊಸ ತಂತ್ರಾಂಶ ಜನಸ್ನೇಹಿಯಾಗಿದೆ ಎಂದರು.
ಕುಂದಾಪುರ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ಭಟ್, ಕುಂದಾಪುರ ಪ್ರಧಾನ ಅಂಚೆ ಪಾಲಕ ಜಿ.ಎಸ್.ಮರಕಾಲ, ತಂತ್ರಜ್ಞ ಸಂದೇಶ ಕುಂದಾಪುರ, ಅಂಚೆ ಜೀವ ವಿಮೆ ವಿಭಾಗದ ಸುರೇಖಾ, ಸಹಾಯಕ ಅಂಚೆ ಪಾಲಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ಸಹಾಯಕ ಅಂಚೆ ಅಧೀಕ್ಷಕ ದಯಾನಂದ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಅಂಚೆ ಪಾಲಕಿ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.