

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನಾಲ್ಕೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೇತಾಜಿ ಸೇವಾ ವೇದಿಕೆ ವತಿಯಿಂದ ಕೊಡೆ ವಿತರಣಾ ಕಾರ್ಯಕ್ರಮ ಜರುಗಿತು.
ಮುಖ್ಯಶಿಕ್ಷಕ ಕೃಷ್ಣ ನಾಯ್ಕ ಕೆ. ಅಧ್ಯಕ್ಷತೆ ವಹಿಸಿದ್ದರು. ನೇತಾಜಿ ಸೇವಾ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ವಾರಾಳಿ, ಅಧ್ಯಕ್ಷ ಸಿಎ ಅವಿನಾಶ್ ರಾವ್, ದಾನಿಗಳಾದ ಕಾಶೀನಾಥ್ ಶೆಣೈ ಕಜ್ಕೆ, ಶಶಿಧರ್ ಶೆಟ್ಟಿಗಾರ್, ನಿವೃತ್ತ ಮುಖ್ಯಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಕೋಟಿ ಹಾಂಡ, ಎಂ.ಕೆ.ನಾಯ್ಕ ಮಿಯಾರು, ರಾವೇಂದ್ರ ಕುಲಾಲ್, ಸಹಪರಿವಾರ ಜಂಗಮೇಶ್ವರ ದೇವಸ್ಥಾನ ಅರ್ಚಕ ಶಶಾಂಕ್ ಭಟ್, ನಾಗೇಂದ್ರ ಆಚಾರ್ ವಾರಾಳಿ, ನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ಸದಸ್ಯೆ ಜಯಲಕ್ಷ್ಮೀ ಶೆಟ್ಟಿ, ವಾಜಿ ಅಧ್ಯಕ್ಷೆ ಕಮಲಾ ಬಾಯಿ, ಪೋಷಕರು, ಎಸ್ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿ ಸಂದ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.