

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನನಗೆ ಸರ್ಕಾರಿ ಶಾಲೆಯೇ ಮೊದಲ ಆದ್ಯತೆ. ಅಲ್ಲಿ ಬರುತ್ತಿರುವ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡಬೇಕೆಂದು ತೀರ್ಮಾನಿಸಿದ್ದೇವೆ. ಈ ಎಲ್ಲ ದೃಷ್ಟಿಕೋನದಿಂದ ಕಕ್ಕಿಂಜೆಗೆ ಈಗಾಗಲೇ ಮೌಲಾನಾ ಅಜಾದ್ ಶಾಲೆ ತಂದಿದ್ದೇವೆ. ಮುಂದೆ 6 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ರಚನೆಯಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಬೆಸ್ಟ್ ೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಗುರುವಾಯನಕೆರೆ ಸರ್ಕಾರಿ ಶಾಲೆಯ 120ನೇ ವರ್ಷದ ನೆನಪಿಗಾಗಿ ಹಳೇ ವಿದ್ಯಾರ್ಥಿಗಳು, ದಾನಿಗಳ ನೆರವಿನಿಂದ ರಚಿಸಲ್ಪಟ್ಟ ಹವಾನಿಯಂತ್ರಿತ ಎಲ್.ಕೆ.ಜಿ-ಯು.ಕೆ.ಜಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಕರಿದ್ದಾರೆ. ಹಿಂದುಗಳು ದೇವಸ್ಥಾನಕ್ಕೆ, ಮುಸ್ಲಿಮರು ಮಸೀದಿಗೆ, ಕ್ರೈಸ್ತರು ಚರ್ಚ್ಗೆ ಹೋಗಬಹುದು. ಆದರೆ ಅದೆಲ್ಲಕ್ಕಿಂತಲೂ ಸರ್ಕಾರಿ ಶಾಲೆಗಳೇ ಶ್ರೇಷ್ಠ ಎಂದರು.
ಧಾರ್ಮಿಕ ಮುಖಂಡ ಕಿರಣ್ ಕುಮಾರ್ ಪುಷ್ಪ್ಪಗಿರಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಲೆತ್ೀ ನೂತನ ಕಟ್ಟಡ ಉದ್ಘಾಟಿಸಿದರು. ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಶೆಟ್ಟಿ, ಸದಸ್ಯ ಮುಸ್ತಾ, ಬಿಆರ್ಸಿ ಬಸವಲಿಂಗಪ್ಪ, ಅರಮಲೆಬೆಟ್ಟ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್, ದಾನಿ ಹೇಮಂತ ಕುಮಾರ್ ಯರ್ಡೂರು, ಹಿರಿಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಪ್ರವೀಣ್ ಕುಮಾರ್, ಕುವೆಟ್ಟು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ, ಕೊರಂಜ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹರೀಶ್ ಕುಮಾರ್, ಸಿಆರ್ಪಿ ರಾಜೇಶ್, ಗ್ರಾಪಂ ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಮೈಮುನಾ, ಎಸ್ಡಿಎಂಸಿ ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಪವಿತ್ರಾ, ಐವನ್ ಪಿರೇರಾ, ಮುಹಮ್ಮದ್ ಹನ್ೀ, ಅಬ್ದುಲ್ ರಹಿಮಾನ್, ದಾನಿಗಳಾದ ಸುಧಾ ರಾಮಕೃಷ್ಣ ನಾಯಕ್, ರಾಮಚಂದ್ರ ಶೆಟ್ಟಿ, ಉದ್ಯಮಿಗಳಾದ ಮುಹಮ್ಮದ್ ಶರ್ೀ, ಲೋಕೇಶ್, ಧನುಷ್, ಪಿಲಿಚಂಡಿಕಲ್ಲು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಖಲಂದರ್ ಬಿ.ಎಚ್. ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಉಮಾ ಡಿ.ಗೌಡ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಲೀಂ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೆರೋನಿಕ ವಂದಿಸಿದರು.
ಕಟ್ಟಡ ನಿರ್ಮಾಣಕ್ಕೆ ದೇಣಿಗೆ
ಒಂದನೇ ತರಗತಿಗಾಗಿ ಕಟ್ಟಡ ನಿರ್ಮಿಸುವ ಇರಾದೆ ಸಮಿತಿಗೆ ಇದ್ದು ಅದಕ್ಕಾಗಿ ಸುಮಂತ್ ಕುಮಾರ್ ಜೈನ್ 1 ಲಕ್ಷ ರೂ., ಹೇಮಂತ ರಾವ್ ಯರ್ಡೂರು 50 ಸಾವಿರ ರೂ., ಕಿರಣಚಂದ್ರ ಪುಷ್ಪಗಿರಿ 25 ಸಾವಿರ ರೂ. ದೇಣಿಗೆ ನೀಡುವುದಾಗಿ ಸಮಾರಂಭದಲ್ಲಿ ಘೋಷಿಸಿದರು.