

ಮೂಡುಬಿದಿರೆ: ಇಲ್ಲಿನ ಸಮಾಜಸೇವಕ ಅನಿಲ್ ಮೆಂಡೊನ್ಸಾ ಪ್ರತಿಷ್ಠಿತ ರಾಷ್ಟ್ರೀಯ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಹಾಗೂ ಚಾನೆಲ್ ಗ್ರೀನ್ ವತಿಯಿಂದ ಗೋವಾದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಂಬೈ ಫಾರ್ಮಾ ಕಂಪನಿಯ ನಿರ್ದೇಶಕ ಡಾ.ರಾಮಕೃಷ್ಣ ಹರಿಶೇಟ್ ಕೊಲ್ವಾಂಕರ್, ಬೆಳಗಾವಿ ಹಿರೇಮಠದ ಶ್ರೀಗುರು ಶಾಂತೇಶ್ವರ್ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಜಸ್ಥಾನ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ.ಪಿ.ಡಿ.ಪಾರೀಕ್, ವಿಜ್ಞಾನಿ ಪ್ರೊ.ಡಾ.ಮಧುಕೃಷ್ಣನ್, ಪರಿಸರವಾದಿ ವಿದುಷಿ ರೇವತಿ ಕಾಮತ್ ಅವರಿಗೂ ರಾಷ್ಟ್ರೀಯ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.