

ಸಿದ್ದಾಪುರ: ಹೆಬ್ಬಾರತಡಿ ಬಾಲೋಡಿ ಭಾಗದ ಜನರ ಸಂಪರ್ಕ ಸೇತುವೆ ಬೇಡಿಕೆಯನ್ನು ದಾನಿಗಳ ಸಹಕಾರದೊಂದಿಗೆ ಈಡೇರಿಸಿದ್ದೇವೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಸಮೃದ್ಧ ಬೈಂದೂರು ಮುಂದಾಳುತ್ವದಲ್ಲಿ ಇಂಡಸ್ ಟಿಎಂಟಿ ಇಂಡಸ್ಟ್ರೀಸ್‌ನ ಸಿಎಸ್‌ಆರ್ ನಿಧಿ ಮೂಲಕ ಸಮ್ಯತ ಫೌಂಡೇಶನ್ ಸಹಭಾಗಿತ್ವದಲ್ಲಿ ನಿರ್ವಾಣಗೊಂಡ ಆಜ್ರಿ ಮತ್ತು ಸಿದ್ದಾಪುರ ಗ್ರಾಮ ಸಂಪರ್ಕಿಸುವ ಆಜ್ರಿ ಗ್ರಾಮದ ಹೆಬ್ಬಾರತಡಿ ಬಾಲೋಡಿ ಸಂಪರ್ಕ ಕಾಲುಸಂಕವನ್ನು ಇತ್ತೀಚೆಗೆ ಉದ್ಘಾಟಿಸಿ ವಾತನಾಡಿದರು.
ಇಂಡಸ್ ಟಿಎಂಟಿ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಶ್ರೀಕಾಂತ್, ಸಮ್ಯತ ಫೌಂಡೇಶನ್ ಸಂಸ್ಥಾಪಕ ಮುರಳಿ ಎಂ., ಆಜ್ರಿ ಗ್ರಾ.ಪಂ. ಅಧ್ಯಕ್ಷೆ ಮೂಕಾಂಬು ಶೆಟ್ಟಿ ಆರ್ಮುಡಿ, ಸದಸ್ಯರಾದ ಪ್ರವೀಣಾಕುವಾರ ಶೆಟ್ಟಿ ಕೊಡ್ಲಾಡಿ, ವೇಣುಗೋಪಾಲ ಶೆಟ್ಟಿ ಆಜ್ರಿ, ಶಾರದ ಪೂಜಾರಿ, ಪಿಡಿಒ ಗೋಪಾಲ ದೇವಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಹಾಗೂ ಸದಸ್ಯರು, ಗುತ್ತಿಗೆದಾರ ವಿದ್ಯಾಧರ ಶೆಟ್ಟಿ, ಎಂಜಿನಿಯರ್ ಜಗದೀಶ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.