ಸಾಧಕ ವಿದ್ಯಾರ್ಥಿ, ದಾನಿಗಳಿಗೆ ಸನ್ಮಾನ

hbr
Published on

ಹೆಬ್ರಿ: ವಿದ್ಯಾರ್ಥಿಗಳಲ್ಲಿ ಎಂದಿಗೂ ಕೀಳರಿಮೆ ಇರಬಾರದು. ಹೆತ್ತವರು ಬಹಳ ಕಷ್ಟಪಟ್ಟು ಮಕ್ಕಳ ಜೀವನ ಸುಖಮಯವಾಗಿರಲಿ ಎಂದು ಬಹಳಷ್ಟು ಶ್ರಮಿಸುತ್ತಾರೆ. ವಿದ್ಯಾರ್ಥಿಗೆ ಅಂಕಗಳು ಪ್ರಾಮುಖ್ಯವಲ್ಲ, ಅದರ ಜತೆಯಲ್ಲಿ ಜೀವನ ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಕನ್ನಡ ಶಾಲೆ ಕಲಿಸುತ್ತದೆ ಎಂದು ಮುನಿಯಾಲು ಉದಯ ಕೃಷ್ಣ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಕುಚ್ಚೂರಿನ ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ, ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ನೆರವೇರಿಸಿ ಮಂಗಳವಾರ ವಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಹರ್ಷ ಶೆಟ್ಟಿ ಬೇಳಂಜೆ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಾದ ತಸ್ವಿ ಡಿ.ಶೆಟ್ಟಿ, ವೈಷ್ಣವಿ, ಜಯಶ್ರೀ, ಸುದೀಕ್ಷಾ, ಅಕ್ಷತಾ, ಹನಿಯ, ಕೀರ್ತನ ಶೆಟ್ಟಿ, ಅಜಯ್, ಜೇನಿಾ, ಅರ್ಚನಾ, ದಿಗಂತ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶಾಲೆಗೆ ಕೊಡುಗೆ ನೀಡಿದ ಪ್ರಸನ್ನಕುವಾರ ಶೆಟ್ಟಿ, ಶಾಂತಿನಿಕೇತನ ಯುವ ವೃಂದದ ನಿಕಟ ಪೂರ್ವ ಅಧ್ಯಕ್ಷ ದೀಕ್ಷಿತ್ ನಾಯಕ್, ಅರುಣ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಉದಯ ಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುವಾನ ನೀಡಿ ಗೌರವಿಸಲಾಯಿತು.

ಉದ್ಯಮಿ ಪ್ರಸನ್ನ ಶೆಟ್ಟಿ, ಮುಖ್ಯ ಶಿಕ್ಷಕಿ ಪ್ರಭಾವತಿ, ದಾನಿ ಭೂತುಗುಂಡಿ ಕರುಣಾಕರ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಶಿಕ್ಷಕರು, ವಿದ್ಯಾರ್ಥಿಗಳು, ಹೆತ್ತವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net