ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ

Sul_Congress
Published on

ಸುಳ್ಯ: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟನೆ ಬುಧವಾರ ಸುಳ್ಯ ತಾಪಂ ಕಚೇರಿಯ ಕಟ್ಟಡದಲ್ಲಿ ನಡೆಯಿತು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಕಚೇರಿ ಉದ್ಘಾಟಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ.ಶಹೀದ್ ತೆಕ್ಕಿಲ್, ಎಂ.ಎಸ್.ಮಹಮ್ಮದ್, ಮುಖಂಡರಾದ ಜಿ.ಕೃಷ್ಣಪ್ಪ, ನಿತ್ಯಾನಂದ ಮುಂಡೋಡಿ, ರಾಜೀವಿ ರೈ, ಎನ್.ಜಯಪ್ರಕಾಶ್ ರೈ, ಪ್ರದೀಪ್ ಕುಮಾರ್ ರೈ ಪಾಂಬಾರು, ಸರಸ್ವತಿ ಕಾಮತ್, ಎಂ.ವೆಂಕಪ್ಪ ಗೌಡ, ರಾಧಾಕೃಷ್ಣ ಬೊಳ್ಳೂರು, ಡಾ.ರಘು, ಗೀತಾ ಕೋಲ್ಚಾರ್, ಬೆಟ್ಟ ರಾಜಾರಾಮ ಭಟ್, ಪಿ.ಎಸ್.ಗಂಗಾಧರ, ಇಕ್ಬಾಲ್ ಎಲಿಮಲೆ, ಸುಧೀರ್ ಕುಮಾರ್ ಶೆಟ್ಟಿ, ಇಸ್ಮಾಯಿಲ್ ಪಡ್ಪಿನಂಗಡಿ, ಶರೀಪ್ ಕಂಠಿ, ಶಾಫಿ ಕುತ್ತಮೊಟ್ಟೆ, ಸುರೇಶ್ ಎಂ.ಎಚ್, ಲಕ್ಷ್ಮೀಶ ಗಬ್ಬಲಡ್ಕ, ಕೆ.ಎಸ್.ಉಮ್ಮರ್, ರಂಜಿತ್ ರೈ ಮೇನಾಲ, ಜಿ.ಕೆ.ಹಮೀದ್, ಮಹಮ್ಮದ್ ಕುಂಞ ಗೂನಡ್ಕ ಕೆ.ಪಿ.ಜಾನಿ, ರಾಜು ಪಂಡಿತ್, ಅಶೋಕ್ ಚೂಂತಾರು, ಸೋಮಶೇಖರ ಕೇವಳ, ಭವಾನಿಶಂಕರ ಕಲ್ಮಡ್ಕ, ಧೀರಾ ಕ್ರಾಸ್ತಾ, ಅಬ್ದುಲ್ ಗಫೂರ್ ಕಲ್ಮಡ್ಕ, ಹರೀಶ್ ಇಂಜಾಡಿ, ಹಸೈನಾರ್ ಹಾಜಿ ಗೋರಡ್ಕ, ಮಿತ್ರದೇವ ಮಡಪ್ಪಾಡಿ, ಶಹೀದ್ ಪಾರೆ, ಎ.ಬಿ.ಇಬ್ರಾಹಿಂ ಕಲ್ಲುಗುಂಡಿ, ಅನಿಲ್ ರೈ, ಸಲೀಂ ಪೆರುಂಗೋಡಿ, ಅಬ್ದುಲ್ ಮಜೀದ್, ಧರ್ಮಪಾಲ ಕೊಯಿಂಗಾಜೆ, ಮೂಸಾ ಕುಂಞ ಪೈಂಬೆಚ್ಚಾಲ್, ರಹೀಂ ಬೀಜದಕಟ್ಟೆ, ಶೌವಾದ್ ಗೂನಡ್ಕ ವಿಜೇಶ್ ಹಿರಿಯಡ್ಕ, ಕಳಂಜ ವಿಶ್ವನಾಥ ರೈ, ಪ್ರವೀಣ ಮರುವಂಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net