

ಬದಿಯಡ್ಕ: ಹಿಂದು ಧರ್ಮ ಉಳಿಯಲು ಬೇಕಾದ ಶಕ್ತಿಯನ್ನು ಧಾರ್ಮಿಕ ಕೇಂದ್ರಗಳು ನೀಡುತ್ತವೆ. ನಮ್ಮ ಸಂಪ್ರದಾಯದ ಆಚರಣೆ ಮನೆಯೊಳಗೆ ಇರಿಸಿ ಬಾಹ್ಯವಾಗಿ ಒಂದೇ ಕುಟುಂಬದಂತೆ ಧರ್ಮ ರಕ್ಷಣೆ, ವೃದ್ಧಿಗೆ ತೊಡಗಿಸಿಕೊಳ್ಳಬೇಕು ಎಂದು ರವೀಶ ತಂತ್ರಿ ಕುಂಟಾರು ಹೇಳಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಉದ್ಯಮಿ ವಸಂತ ಪೈ ಬದಿಯಡ್ಕ ಬ್ರಹ್ಮಕಲಶೋತ್ಸವ ಸಂದರ್ಭದ ವಿಶಿಷ್ಟ ಯೋಜನೆ ‘ಶಿವಾರ್ಪಣಂ’ ಮನವಿ ಪತ್ರ ಬಿಡುಗಡೆ ಮಾಡಿದರು.
ಎಣ್ಮಕಜೆ ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ‘ಹುಂಡಿ ಕರಂಡಕ’ ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 1ರಂದು ನಡೆಯಲಿರುವ ಮನೆ-ಮನೆ ಭೇಟಿ ಅಭಿಯಾನದ ಕುರಿತು ಬ್ರಹ್ಮಕಲಶೋತ್ಸವ ಸಮಿತಿಯ ಸುಮಿತ್ ರಾಜ್ ಮಾಹಿತಿ ನೀಡಿದರು.
ಪತ್ತಡ್ಕ ಗಣಪತಿ ಭಟ್, ಸಮಿತಿ ಅಧ್ಯಕ್ಷ ವೈ.ಶಾಮ ಭಟ್, ಗೌರವಾಧ್ಯಕ್ಷ ಡಾ.ಸುಬ್ರಾಯ ಭಟ್ ಉಪಸ್ಥಿತರಿದ್ದರು. ಶಶಿಪ್ರಭಾ ವರುಂಬುಡಿ ಪ್ರಾರ್ಥನೆ ಮಾಡಿದರು. ಸಮಿತಿಯ ಖಜಾಂಚಿ ವೈ.ವಿ.ಸುಬ್ರಹ್ಮಣ್ಯ ಸ್ವಾಗತಿಸಿದರು. ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ್ ವೈ.ಎಚ್ ವಂದಿಸಿದರು.